ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೈಂ ಮಾಡುವವರಿಗೆ ಸಿಂಹಸ್ವಪ್ನವಾಗಿದ್ದ "ತುಂಗಾ" ಇನ್ನು ನೆನಪಷ್ಟೇ

ದಾವಣಗೆರೆ: ಪೊಲೀಸ್ ಇಲಾಖೆಯ ಕ್ರೈಂ ಡಾಗ್ ತುಂಗಾ ಕಾಲಿಟ್ಟರೆ ಸಾಕು ಆರೋಪಿಗಳ ಎದೆಯಲ್ಲಿ ಢವಢವ ಶುರುವಾಗುತಿತ್ತು. ಯಾಕೆಂದರೆ ಅಷ್ಟೊಂದು ಚಾಣಾಕ್ಷ, ಚಾಕಚಕ್ಯತೆಯಿಂದ ಆರೋಪಿಗಳನ್ನು ಗುರುತು ಹಿಡಿಯುತಿತ್ತು. ಎಷ್ಟೋ ಪ್ರಕರಣಗಳನ್ನು ಬೇಧಿಸಿ ಶಹಬ್ಬಾಸ್ ಗಿರಿ ಪಡೆದಿತ್ತು. ಕ್ಲಿಷ್ಟಕರ ಕೇಸ್ ಗಳು ಈ ಶ್ವಾನದಿಂದಾಗಿ ಪತ್ತೆಯಾಗಿದ್ದವು. ದೇಶದ ಗಮನ ಸೆಳೆಯುವಂತೆ ಸಾಧನೆ ಮಾಡಿದ್ದ ತುಂಗಾ ಇಂದು ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದೆ.

ತುಂಗಾಳಿಗೆ ಬಿಳಿರಕ್ತ ಕಣ ಕಡಿಮೆಯಾಗಿತ್ತು. ಆಗಿನಿಂದಲೂ ಸ್ವಲ್ಪ ಸೊರಗಿತ್ತು. ವೈದ್ಯರು ಹೇಳುವ ಪ್ರಕಾರ ಡೆಂಘ್ಯೂ ಕಾಣಿಸಿಕೊಂಡ ಕಾರಣ ಮೃತಪಟ್ಟಿರಬಹುದು. ಆರೋಗ್ಯವಾಗಿಯೇ ಇದ್ದ ತುಂಗಾ ಕಳೆದ ಕೆಲ ದಿನಗಳಿಂದ ಸ್ವಲ್ಪ ಸೊರಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ. ತನ್ನ ಜೀವಿತಾವಧಿಯಲ್ಲಿ ಪೊಲೀಸ್ ಇಲಾಖೆಗೆ ನೀಡಿರುವ ಸೇನೆ ಅನನ್ಯ ಹಾಗೂ ಅತ್ಯದ್ಭುತ.

ತುಂಗಾ ಟ್ರ್ಯಾಕ್ ರೆಕಾರ್ಡ್:

ಇದುವರೆಗೆ 650 ಪ್ರಕರಣಗಳಲ್ಲಿ ತುಂಗಾ ಹಾಜರಾತಿ ಹಾಕಿತ್ತು. ಈ ಪೈಕಿ 71 ಕೊಲೆ ಪ್ರಕರಣಗಳು, 35 ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ನಾಲ್ಕು ಪ್ರಕರಣಗಳಲ್ಲಿ ಗಲ್ಲು ಹಾಗೂ 4 ಕೇಸ್ ಗಳಲ್ಲಿ ಆರೋಪಿಗಳಲ್ಲಿ ಜೀವಾವಧಿ ಶಿಕ್ಷೆಯಾಗುವಲ್ಲಿ ಈ ಶ್ವಾನದ ಪಾತ್ರ ಮಹತ್ವದ್ದಾಗಿತ್ತು.

Edited By : Nirmala Aralikatti
PublicNext

PublicNext

26/08/2022 08:00 pm

Cinque Terre

28.17 K

Cinque Terre

19

ಸಂಬಂಧಿತ ಸುದ್ದಿ