ವಿಶೇಷ ಸಂಪಾದಕೀಯ : ಕೇಶವ ನಾಡಕರ್ಣಿ
ನೋಡಿ ಈ ಬಿಜೆಪಿ ಸರಕಾರದ ಹಣೆಬರಹ, ಎಲ್ಲದಕ್ಕೂ ಜಿಎಸ್ಟಿ, ಜಿಎಸ್ಟಿ. ಹಾಲು ಮೊಸರಿನಿಂದ ಹಿಡಿದ ಹೆಣ ಹೂಳುವುದಕ್ಕೂ, ಸುಡುವುದಕ್ಕೂ ತೆರಿಗೆ ಹೇರಲು ಹೊರಟಿದೆಯಲ್ಲ ಇದಕ್ಕಿಂತ ನಾಚಿಕೆಗೇಡಿತನ ಬೇಕೆ?
ಬಡವರು ತಿನ್ನು ಹಾಲು ಮೊಸರಿಗೂ ಸರಕಾರ ಜಿಎಸ್ಟಿ ಹೇರಿತು. ದಿಲ್ಲಿಯಿಂದ ಹಳ್ಳಿವರೆಗೆ ಜನ ಉಗಿದು ಉಪ್ಪಿನಕಾಯಿ ಹಾಕಿದ ನಂತರ ರದ್ದುಪಡಿಸಿತು. ನಿಮ್ಗೆ ಗೊತ್ತೆ GST ಹಿಂತೆಗೆದುಕೊಂಡ ನಂತರವೂ ಕೆಲವು ಕಡೆ ಇನ್ನೂ ಹೆಚ್ಚಿನ ದರದಲ್ಲಿಯೇ ಹಾಲು ಮೊಸರು ಮಾರಲಾಗುತ್ತಿದೆ.
ಬದುಕಿದ್ದಾಗ ಎಲ್ಲದಕ್ಕೂ GST ಕೊಡಿ, ಈಗ ಸತ್ತಮೇಲೂ ಕೊಡಿ ಅಂದ್ರೆ ಹೇಗೆ ಮೋದಿ ಅವ್ರೆ?
ತಿನ್ನುವ ಅನ್ನ, ತೊಡುವ ಬಟ್ಟೆ ಕುಡಿವ ನೀರಿನವರೆಗೆ GST ಕೊಡ್ತಾ ಇದ್ದೇವೆ. ಈಗ ನೆಮ್ಮದಿಯಿಂದ ಸಾಯಲೂ ಬಿಡುತ್ತಿಲ್ಲವಲ್ಲ ಏಕೆ? ಸರಕಾರದ ಈ ಕೆಟ್ಟ ದುಷ್ಟ ನಿರ್ಧಾರ ವಿರುದ್ಧ ಲೋಕಸಭೆಯಲ್ಲಿ ಬೆಂಡೆತ್ತಿದ್ದ ನಂತರ ಹಣಕಾಸು ಮಂತ್ರಿ ಶ್ರೀಮತಿ ನಿರ್ಮಾಲಾ ಸೀತಾಮನ್, ಅಂತ್ಯಕ್ರಿಯೆಗೆ, ದಫನ್ ಮಾಡುವುದು, ಶವಾಗಾರ ಸೇವೆಗೆ ಯಾವುದೇ GST ಇಲ್ಲ ಅಂತ ಸಬೂಬು ಹೇಳಿದ್ದಾರೆ.
ಆದ್ರೆ ಸರಕಾರದ ಕುತಂತ್ರ ನೋಡಿ, ಸ್ಮಶಾನ ನಿರ್ಮಾಣ ಗುತ್ತಿಗೆ ಕಾಮಗಾರಿ ಮೇಲೆ ಮಾತ್ರ 18 % GST ಅಂತೆ. ಮಂತ್ರಿ ನಿರ್ಮಲಾ ಸೀತಾರಾಮನ್ ಅವ್ರೆ, ಗುತ್ತಿಗೆ ಕಾಮಗಾರಿ ಇರ್ಲಿ, ಇನ್ನಾವುದೇ ಇರಲಿ... ಸ್ಮಶಾನ ನಿರ್ಮಾಣವೆಂದರೆ ಅದು ಹೃದಯಸ್ಪರ್ಶಿ ವಿಷಯ. ಅಲ್ಲಿ ಒಬ್ಬ ಗುತ್ತಿಗೆದಾರ ಬಳಸುವ ಇಟ್ಟಿಗೆ, ಸಿಮೆಂಟ್ ಸ್ಟೀಲ್ ಮಹತ್ವ ಪಡೆದುಕೊಳ್ಳುವುದಿಲ್ಲ ಸ್ಮಶಾನ ಎನ್ನುತ್ತಲೆ ಜನ ಸಾಮಾನ್ಯರು ನೋಡುವ ದೃಷ್ಟಿಯೇ ಬೇರೆ.
ರಸ್ತೆ, ಸೇತುವೆ, ಮೆಟ್ರೊ ಇನ್ನಿತರ ಕಟ್ಟಡಗಳ ನಿರ್ಮಾಣಕ್ಕೆ 18 % GST ಹಾಕಿದಾಗ ಜನರಿಗೆ ಏನೂ ಅನಿಸುವುದಿಲ್ಲ, ಆದ್ರೆ ಸ್ಮಶಾನ ನಿರ್ಮಾಣಕ್ಕೂ ತೆರಿಗೆ ಹೇರುವುದೆಂದರೆ ಏನು ಅರ್ಥ? ಸ್ಮಶಾನ ನಿರ್ಮಾಣಕ್ಕೆ 18 % GST ಯಿಂದ ವಿನಾಯ್ತಿ ನೀಡಿದ್ದರೆ ಸರಕಾರವೇನೂ ಬಿದ್ದೋಗ್ತಿರಲಿಲ್ಲ. ಬದುಕಿದ್ದಾಗ ತೆರಿಗೆ ಕೊಟ್ಟು ಕೊಟ್ಟು ಸಾಯುವ ಜನರಿಂದ ಸತ್ತಮೇಲೂ, ಸ್ಮಶಾನ ನಿರ್ಮಾಣ ನೆಪದಲ್ಲಿ ಹಣ ಕೀಳುವ ನಿಮ್ಮ ಕೊಳಕು ಬುದ್ಧಿಗೆ ಏನೆನ್ನಬೇಕು.
ಅಂತ್ಯಕ್ರಿಯೆ ಸೇವೆಗೆ ಯಾವುದೇ ತೆರಿಗೆ ಇಲ್ಲ ಅಂತೀರಾ... ಆದ್ರೆ ಸ್ಮಶಾನ ನಿರ್ವಹಣೆ ಕಾರ್ಯದ ತೆರಿಗೆ ಹೇರಿದ್ದೀರಾ. ಅಂದ್ರೆ ನಿರ್ವಹಣೆ ಮಾಡುವವರು ಆ ತೆರಿಗೆ ಹಣವನ್ನು ಸಾರ್ವಜನಿಕರಿಂದಲೇ ವಸೂಲಿ ಮಾಡುತ್ತಾರಲ್ಲವೆ? ಇದು ಪರೋಕ್ಷವಾಗಿ ಹೆಣಕ್ಕೂ ತೆರಿಗೆ ವಿಧಿಸಿದಂತಾಗುವುಲ್ಲವೆ.
ಗಂಭೀರ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗುವ ರೋಗಿ ಸಾವು ಬದುಕಿನ ನಡುವೆ ಹೋರಾಡಬೇಕು. ಬದುಕಿದರೆ ತನ್ನಲ್ಲಿರುವ ಎಲ್ಲ ಹಣವನ್ನು ಆಸ್ಪತ್ರೆ ಹಾಸಿಗೆಗಾಗಿ GST ಕೊಡಬೇಕು. ದುರದೃಷ್ವವಶಾತ್ ಸತ್ತರೂ ಈಗ GST ಕಟ್ಟಬೇಕು. ನೋಡಿ ನಮ್ಮ ಹಣೆಬರಹ.
ಮೋದಿ ಅವ್ರೆ,,,ಸಾಯುವವರೆಗೆ ತೆರಿಗೆ ಮೂಲಕ ರಕ್ತ ಹೀರಿ ಸತ್ತ ಮೇಲೂ ನಮ್ಮನ್ನು ಬಿಡಬೇಡಿ ಏಕೆಂದ್ರೆ ಈ ದೇಶದ ಮಹಾನ್ ಜನತೆ ಸತ್ತ ಮೇಲೂ ದೇಶ ಸೇವೆ ಮಾಡ್ತಾರೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಹುದಲ್ಲವೆ?
ಮೃತರನ್ನೂ ಬಿಡದ ಆಜಾದಿಕೆ ''ಅಮೃತ್ '' ಮಹೋತ್ಸವ '' ಸ್ಮರಣೀಯವಾಗಿರಲಿ.
PublicNext
04/08/2022 11:30 am