ಮುಂಬೈ: ಇಲ್ಲಿಯ 10 ವರ್ಷದ ಬಾಲಕಿ ಈಗೊಂದು ಅದ್ಭುತ ಸಾಧನೆ ಮಾಡಿದ್ದಾಳೆ. ಕೇವಲ 11 ದಿನಗಳಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ಮೊಟ್ಟ ಮೊದಲ ಅತಿ ಕಿರಿಯ ಭಾರತದ ಪರ್ವತಾರೋಹಿ ಕೂಡ ಆಗಿದ್ದಾಳೆ.
10 ವರ್ಷದ ಬಾಲಕಿ ರಿದಮ್ ಮಮಾನಿಯಾ ಮೂಲತಃ ಸ್ಕೇಟರ್.ಆದರೆ, ಎವರೆಸ್ಟ್ ಬೇಸ್ ಕ್ಯಾಂಪ್ ಏರಿ ಈಗ ಎಲ್ಲರ ಗಮನ ಸೆಳೆದಿದ್ದಾಳೆ.
ರಿದಮ್ ಮಮಾನಿಯಾ ಮುಂಬೈನ ಎಂಇಟಿ ಖುಷಿಕುಲ್ ವಿದ್ಯಾಲಯದಲ್ಲಿ 5 ನೇ ತರಗರಿ ಓದುತ್ತಿದ್ದಾಳೆ. ಮೇ-6 ರಂದು ಮಧ್ಯಾಹ್ನ 1 ಗಂಟೆ ಹೊತ್ತಿಗೆ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ್ದಾಳೆ ಈ ಬಾಲಕಿ.
ಎವರೆಸ್ಟ್ ಬೇಸ್ ಕ್ಯಾಂಪ್ 5,364 ಎತ್ತರದಲ್ಲಿಯೇ ಇದೆ. ಇದನ್ನ 11 ದಿನದಲ್ಲಿಯೇ ಏರಿದ್ದಾಳೆ ರಿದಮ್ ತಾಯಿ ಉರ್ಮಿ ಮಾಧ್ಯಕ್ಕೆ ತಿಳಿಸಿದ್ದಾಳೆ.
PublicNext
23/05/2022 02:57 pm