ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈ ಕೊಟ್ಟ ಕರೆಂಟ್ : ವಧು ವರರು ಅದಲು ಬದಲು

ಮಧ್ಯಪ್ರದೇಶ: ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ತುಂಬಾ ಮುಖ್ಯ. ಅದಕ್ಕಾಗಿ ಎಲ್ಲರೂ ಸಾವಿರಾರು ಕನಸು ಕಂಡಿರುತ್ತಾರೆ ಆದರೆ ಇಲ್ಲೊಂದು ಮದುವೆಯಲ್ಲಿ ತಾಳಿ ಕಟ್ಟುವ ಸಮಯದಲ್ಲಿ ಆದ ಎಡವಟ್ಟು ನಿಜಕ್ಕೂ ಖೇದಕರ. ಹೌದು ತಾಳಿ ಕಟ್ಟುವ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಂಡು ವರನೊಬ್ಬ ವಧುವಿನ ಬದಲಾಗಿ ಆಕೆಯ ತಂಗಿಗೆ ತಾಳಿ ಕಟ್ಟಿದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.

ರಮೇಶ್ ಲಾಲ್ ಎಂಬುವವರ ಇಬ್ಬರು ಪುತ್ರಿಯರಾದ ನಿಕಿತಾ ಹಾಗೂ ಕರಿಷ್ಮಾ ಅವರಿಗೆ ಕ್ರಮವಾಗಿ ಬೇರೆ ಬೇರೆ ಕುಟುಂಬದ ಇಬ್ಬರು ಹುಡುಗರಾದ ದಂಗ್ವಾರ ಗ್ರಾಮದ ಭೊಲ ಹಾಗೂ ಗಣೇಶ್ ಎಂಬುವರೊಂದಿಗೆ ವಿವಾಹ ನಿಗದಿಯಾಗಿತ್ತು. ಆದರೆ ಮದುವೆ ವೇಳೆ ವಧುಗಳು ಮಾಸ್ಕ್ ಜೊತೆಗೆ ಮುಖ ಕಾಣದಂತೆ ಶಾಲು ಧರಿಸಿದ್ದರಿಂದ ಅದರ ಜೊತೆಗೆ ವಿದ್ಯುತ್ ಕೂಡ ಕೈ ಕೊಟ್ಟಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮದುವೆ ಮುಗಿದ ನಂತರ ಸಹೋದರಿಯರನ್ನು ಅವರ ಅತ್ತೆ ಮನೆಗಳಿಗೆ ಕಳುಹಿಸಿ ಕೊಟ್ಟಿದ್ದಾರೆ. ಅಲ್ಲಿಯವರೆಗೂ ವಧುಗಳು ಬದಲಾದ ಬಗ್ಗೆ ಯಾರ ಗಮನಕ್ಕೂ ಬಂಧಿರಲಿಲ್ಲ. ನಂತರ ವಧು ಬದಲಾಗಿರುವುದು ತಿಳಿದು ಬಂದಿದೆ.ವಧು ಬದಲಾಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಎರಡು ಕುಟುಂಬಗಳ ಮಧ್ಯೆ ದೊಡ್ಡ ವಿವಾದ ಶುರುವಾಗಿದೆ. ಬಳಿಕ ಮತ್ತೊಮ್ಮೆ ಸರಿಯಾದ ವಧುವಿನೊಂದಿಗೆ ವಿವಾಹ ನೆರವೇರಿಸಿದ್ದಾರೆ.

Edited By : Nirmala Aralikatti
PublicNext

PublicNext

10/05/2022 10:36 am

Cinque Terre

36.52 K

Cinque Terre

3