ಏನಾದರೂ ಸಾಧನೆ ಮಾಡಿದಾಗ ಅಥವಾ ಮದುವೆ, ಹುಟ್ಟುಹಬ್ಬಕ್ಕೆ ಬ್ಯಾನರ್ ಫ್ಲೆಕ್ಸ್ ಹಾಕಿಸುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಮದುಮಗನಿಗೆ ಅವನ ಫ್ರೆಂಡ್ಸ್ ಹಾಕಿಸಿದ ಬ್ಯಾನರ್ ಕಂಡು ಶಾಕ್ ಆಗಿದೆ.
ಹೌದು ಮದುಮಗನ ಮೊದಲ ರಾತ್ರಿಗೆ ಊರ ತುಂಬೆಲ್ಲಾ ಫ್ಲೆಕ್ಸ್ ಹಾಕಿಸಿದ ಆತನ ಫ್ರೆಂಡ್ಸ್ ಫ್ಲೆಕ್ಸ್ ನಲ್ಲಿ ಬರೆಸಿದ್ದು ಇದೇ ನೋಡಿ…
'ನಮ್ಮ ಮುಗ್ದ ಗೆಳೆಯ ರಸಿಕ
ಸನತ್ ಕೋಟ್ಯಾನ, ಇವರ ಮದುವೆ ನಂತರದ ಪ್ರಪ್ರಥಮ ಆಟ
ಮೊದಲ ರಾತ್ರಿಯ ಸಂಭ್ರಮ
ದಿನಾಂಕ: ಮೇ 6, 2022
ಸ್ಥಳ: ಕುಚ್ಚೂರು ತೋಟದ ಮನೆ
ಸಮಯ: ರಾತ್ರಿ 12 ಗಂಟೆಯಿಂದ
ಎದ್ದು, ಬಿದ್ದು, ಹೋರಾಡಿ
ಗೆದ್ದು ಬಾ ಗೆಳೆಯ
ನಿಮ್ಮ ಪ್ರಥಮ ರಾತ್ರಿಗೆ ಶುಭಕೋರುವವರು
ಚಿ.ತು ಸಂಘ'
ಎಂದು ಬ್ಯಾನರ್ ಹಾಕಿದ್ದಾರೆ. ಸದ್ಯ ಮೊದಲ ರಾತ್ರಿಗೆ ಬ್ಯಾನರ್ ಹಾಕಿ ಶುಭಕೋರಿರುವ ಪರಿಯನ್ನು ಕಂಡ ಜನ ಆಶ್ಚರ್ಯ ಮತ್ತು ಮುಜುಗರ ಪಡುತ್ತಿದ್ದಾರೆ. ಈ ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬ್ಯಾನರ್ ನಲ್ಲಿ ಸ್ಥಳ ಉಡುಪಿ ಎಂದು ಹಾಕಲಾಗಿದೆ.
PublicNext
07/05/2022 05:52 pm