ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮಲ್ಲಿ ಇಲ್ಲದ ಆ ಗುಣ ಪ್ರಾಣಿಗಳಲ್ಲಿಯೇ ಇರೋದು !

ತಮಿಳುನಾಡು: ಆನೆಗಳು ರೈತನ ಬಾಳೆ ತೋಟಕ್ಕೆ ದಾಳಿ ಮಾಡಿವೆ. ಅಲ್ಲಿದ್ದ ಎಲ್ಲ ಬಾಳೆ ಗಿಡಗಳ ಮೇಲೆ ಮನಸೋಯಿಚ್ಛೆ ದಾಳಿ ಮಾಡಿವೆ. ಆದರೆ, ಅದೊಂದು ಬಾಳೆ ಗಿಡವನ್ನ ಒಂದು ಚೂರು ಹಾಳು ಮಾಡಿಲ್ಲ. ಯಾಕೆ ಅಂತಿರೋ ? ಬನ್ನಿ, ಹೇಳ್ತಿವಿ.

ಮಾನವೀಯ ಗುಣಗಳು ಮನುಷ್ಯನಿಗಿಂತಲೂ ಪ್ರಾಣಿಗಳಲ್ಲಿಯೇ ಹೆಚ್ಚು ಅಂತ ಹೇಳುತ್ತದೆ ಈ ಒಂದು ಘಟನೆ. ತಮಿಳುನಾಡಿನ ಸತ್ಯ ಮಂಗಲದಲಿರೋ ರೈತನ ಬಾಳೆತೋಟಕ್ಕೆ ಆನೆಗಳು ನುಗ್ಗಿವೆ.ಇಡೀ ತೋಟವನ್ನೇ ಹಾಳು ಮಾಡಿವೆ. ಇದನ್ನ ಕಂಡ ಶಾಕ್ ಆಗಿಯೇ ಗೋಳಿಟ್ಟಿದ್ದಾನೆ. ಆಗಲೇ ಇಲ್ಲಿಗೆ ಬಂದ ಜನ ರೈತನಿಗೆ ಧೈರ್ಯವನ್ನೂ ತುಂಬಿದ್ದಾರೆ. ಆದರೆ, ಇಲ್ಲಿಗೆ ಬಂದ ಕೆಲವರಿಗೆ ಸೇಫ್ ಆಗಿಯೇ ಇದ್ದ ಈ ಒಂದೇ ಒಂದು ಬಾಳೆ ಗಿಡ ಕಂಡಿದೆ. ಅದನ್ನ ಆಶ್ಚರ್ಯದಿಂದಲೂ ಅವರೆಲ್ಲ ಪರಿಶೀಲಿಸಿದ್ದಾರೆ. ಆಗಲೇ ಈ ಒಂದು ಸತ್ಯ ಗೊತ್ತಾಗಿದೆ.

ಆಗ ತಿಳಿದು ಬಂದ ಸತ್ಯ ಏನೂ ಗೊತ್ತೇ ? ಈ ಒಂದು ಬಾಳೆ ಗಿಡದಲ್ಲಿ ಹಕ್ಕಿಯೊಂದು ಗೂಡು ಕಟ್ಟಿತ್ತು. ಅದಕ್ಕೇನೆ ಆನೆಗಳು ಹಕ್ಕಿ ಗೂಡು ಇರೋ ಬಾಳೆ ಗಿಡವನ್ನ ಏನೂ ಮಾಡದೇ ಉಳಿಸಿ ಮಾನವನಗಿಂತಲೂ ನಾವೇ ಮಿಗಿಲು ಅನ್ನೋದನ್ನ ತೋರಿಸಿಕೊಟ್ಟು ಹೋಗಿವೆ.

Edited By : Shivu K
PublicNext

PublicNext

03/05/2022 04:46 pm

Cinque Terre

59.04 K

Cinque Terre

0