ಶಿರಹಟ್ಟಿ: ಅದೊಂದು ಕಾಲ ಇತ್ತು. ಆಗ ಅಲ್ಲಿ ಪೆಪ್ಸಿ ಇರಲಿಲ್ಲ. ಕೋಲಾಗಳ ಹಾವಳಿನೂ ಇರಲಿಲ್ಲ. ಎಳನೀರು ಮತ್ತು ಮಜ್ಜಿಗೆಯ ನಡುವೆ ಗೋಲಿ ಸೋಡಾ ಎಂಬ ಅದ್ಭುತ ಮಕ್ಕಳಾದಿಯಾಗಿ ಎಲ್ಲರನ್ನ ಸೆಳೆಯುತ್ತಿತ್ತು. ಆದರೆ, ಈಗ ಗೋಲಿ ಸೋಡಾ ಅನ್ನೋದು ಕೇವಲ ನೆನಪಾಗಿ ಉಳಿದಿದೆ. ಹಳ್ಳಿಗಳಲ್ಲಿ ಅಲ್ಲೊಬ್ಬ, ಇಲ್ಲೊಬ್ಬ ಗೋಲಿ ಸೋಡಾ ಮಾರೋ ವ್ಯಕ್ತಿ ಸಿಗುತ್ತಾರೆ.
ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಗೋಲಿ ಸೋಡಾ ಮಾರೋ ಲಕ್ಷ್ಮಣ ಸಿಕ್ಕಿ ಬಿಟ್ಟ ನೋಡಿ. ಆತನೂ ಗೋಲಿ ಸೋಡಾದ ಖಾಲಿ ಬಾಟಲ್ ಗಳನ್ನ ಇಟ್ಟುಕೊಂಡು ಈ ಯುಗದ ಸೋಡಾ ಮಾರ್ತಾ ಇದ್ದಾನೆ.
ನಮಗೋಸ್ಕರ ಗೋಲಿ ಸೋಡಾ ಮಾಡಿ ಕೊಟ್ಟಿರೋದು ನಮಗೆ ವಿಶೇಷವೇ ಸರಿ. ಪ್ರತಿ ಗೋಲಿ ಸೋಡಾಕ್ಕೆ 20 ರೂಪಾಯಿ ಮಾತ್ರ. ಇದನ್ನ ಕುಡಿದಾಗ ಆದ ಖುಷಿನೇ ಬೇರೆ ಬಿಡಿ.
ಈ ಕಾಲದ ಸೋಡಾ ಕೂಡ ಬೇರೆ ರೀತಿಯ ಫೀಲ್ ಕೊಡ್ತು. ಗೋಲಿ ಸೋಡಾದಲ್ಲಿ ಬಾಟಲ್ ಬ್ಲಾಸ್ಟ್ ಆಗಬಾರದು ಅಂತಲೇ ಗ್ಯಾಸ್ ಕಡಿಮೆ ಇರುತ್ತದೆ. ಈಗೀನ ಸೋಡಾದಲ್ಲಿ ಗ್ಯಾಸ್ ಹೆಚ್ಚು ಇತ್ತು. ಅದಕ್ಕೆ ಇದರ ಟೇಸ್ಟ್ ಬೇರೆ ರೀತಿ ಇತ್ತು. ಒಂದೇ ಮಾತ್ ನಲ್ಲಿ ಹೇಳೋದಾದ್ರೆ, I am missing ಗೋಲಿ ಸೋಡಾ.
-ರೇವನ್ ಪಿ.ಜೇವೂರ್, PublicNext ಶಿರಹಟ್ಟಿ
PublicNext
26/04/2022 04:57 pm