ಮದುವೆಗೂ ಮುನ್ನವೇ ಯುವತಿಯೊಬ್ಬಳು ತನ್ನ ಭಾವಿ ಪತಿಗೆ ಡಿಮ್ಯಾಂಡ್ ವೊಂದನ್ನು ಇಟ್ಟಿದ್ದಾಳೆ. ಸದ್ಯ ತನ್ನ ಭಾವಿ ಪತ್ನಿ ಇಟ್ಟ ಬೇಡಿಕೆ ಈಡೇರಿಸಲಾಗದೇ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ನೋವನ್ನು ಹೊರಹಾಕಿದ್ದಾನೆ.
ಸದ್ಯ ಈ ಸಂದೇಶ ಕಂಡ ಅನೇಕರು ತಮ್ಮದೇ ರೀತಿಯಲ್ಲಿ ವಿವಿಧ ಪರಿಹಾರಗಳನ್ನು ಸೂಚಿಸಿದ್ದಾರೆ. ಅಷ್ಟಕ್ಕೂ ಆ ಯುವತಿ ಇಟ್ಟ ಬೇಡಿಕೆ ಏನೆಂದರೆ ನಿಶ್ಚಿತಾರ್ಥಕ್ಕೆ ಡೈಮಂಡ್ ರಿಂಗ್ ಕೇಳಿದ್ದಾಳೆ. ಇತ್ತ ಯುವಕ ಮನೆಯಲ್ಲಿಯೂ ಹೇಳಲಾಗದೇ ತನ್ನ ಆರ್ಥಿಕ ಪರಿಸ್ಥಿತಿ ಬಗ್ಗೆ ಹುಡುಗಿಗೂ ಹೇಳಲಾಗದೇ ವಿಲ ವಿಲ ಒದ್ದಾಡುತ್ತಿದ್ದಾನೆ.
‘ಮದುವೆ ಫಿಕ್ಸ್ ಆಗಿದೆ, ಆಕೆಯನ್ನು ಕಂಡರೆ ನನಗೂ ತುಂಬಾ ಇಷ್ಟ ಆದರೆ ನಿಶ್ಚಿತಾರ್ಥಕ್ಕೆ ಡೈಮಂಡ್ ರಿಂಗ್ ಕೇಳಿದ್ದಾಳೆ. ನನ್ನ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಮನೆಯಲ್ಲಿ ತಂದೆ ತಾಯಿಗೂ ಹೇಳದ ಸಮಸ್ಯೆ ಎದುರಿಸುತ್ತಿದ್ದೇನೆ ಎಂದು ಹುಡುಗ ಸಾಮಾಜಿಕ ಜಾಲತಾಣದಲ್ಲಿ ಅಲವತ್ತುಕೊಂಡಿದ್ದಾನೆ.
PublicNext
25/04/2022 08:32 pm