ಪ್ರಸ್ತುತ ಜಗತ್ತಿನಲ್ಲಿ ಏನು ಮಾಡಿದ್ರು ಅದು ಫ್ಯಾಶನ್. ಸದ್ಯ ಇಲ್ಲೊಬ್ಬ ವ್ಯಕ್ತಿ ಮೈ ತುಂಬಾ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಟ್ಯಾಟೂ ಮ್ಯಾನ್ ಆಗಿದ್ದಾನೆ. ಇತ್ತೀಚಿನ ವರ್ಷಗಳಲ್ಲಿ ಟ್ಯಾಟೂ ಟ್ರೆಂಡ್ ಆಗಿದೆ. ಕೈ, ಕಾಲು, ಬೆನ್ನು, ತೋಳು, ಸೊಂಟ ಹೀಗೆ ಹಲವೆಡೆ ಆಕರ್ಷಕವಾಗಿ ಟ್ಯಾಟೂ ಹಾಕಿಕೊಳ್ಳುತ್ತಾರೆ.
ಆದ್ರೆ ಇಲ್ಲೊಬ್ರು ತಾತ ಮೈತುಂಬಾ ಟ್ಯಾಟೂ ಹಾಕ್ಕೊಂಡಿದ್ದಾರೆ. ಹೀಗೆ ದೇಹದ ತುಂಬೆಲ್ಲಾ ಟ್ಯಾಟೂ ಹಾಕಿಸಿಕೊಂಡವರು ಮಾರ್ಸೆಲೊ ಬ್ಬೋಯ್. ಮಾಡೆಲ್ ಮತ್ತು ಟ್ಯಾಟೂ ಕಲಾವಿದ.
15 ವರ್ಷದವರಾಗಿದ್ದಾಗಲೇ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಂಡಿರು ಇವರು ಬಳಿಕ ಟ್ಯಾಟೂ ಕುರಿತಾದ ಕ್ರೇಜ್ ಹೆಚ್ಚಾಯಿತು. ದೇಹದ ವಿವಿಧ ಭಾಗಗಳಲ್ಲಿ ಒಂದೊಂದೇ ಟ್ಯಾಟೂ ಹಾಕಿಕೊಳ್ಳುತ್ತಾ ಬಂದರು. ಸದ್ಯ 1500ಕ್ಕೆ ತಲುಪಿದೆ. ನಾನು ಹೆಚ್ಚು ಹಚ್ಚೆಗಳನ್ನು ಬಯಸುತ್ತೇನೆ ಎಂದು ನಾನು ಅರಿತುಕೊಂಡಾಗ ನನಗೆ 22 ವರ್ಷ, ಮತ್ತು ಅಂದಿನಿಂದ ನಾನು ಹಾಕಿಸಿಕೊಳ್ಳುತ್ತಾ ಬಂದಿರುವುದಾಗಿ ಮಾರ್ಸೆಲೊ ಬ್ಬೋಯ್ ಹೇಳುತ್ತಾರೆ.
ಈ ಅಜ್ಜ ತನ್ನ ಕಣ್ಣುಗಳು ಸೇರಿದಂತೆ ದೇಹದ 98 ಪ್ರತಿಶತದಷ್ಟು ಭಾಗದಲ್ಲಿ ಟ್ಯಾಟೂಗಳನ್ನು ಹೊಂದಿದ್ದಾರೆ. ಇವರ ದೇಹದಲ್ಲಿ ಒಟ್ಟು 1500 ಟ್ಯಾಟೂಗಳಿವೆ. ಸದ್ಯ ಕಾಲು ಮತ್ತು ಇತರ ಕೆಲವು ಭಾಗಗಳಲ್ಲಿ ಮಾತ್ರ ಟ್ಯಾಟೂ ಇಲ್ಲ. ಆದರೆ ಅಲ್ಲಿಯೂ ಟ್ಯಾಟೂ ಹಾಕಿಸಿಕೊಳ್ಳುವ ಪ್ಲಾನ್ ಇದೆ ಎಂದು ಮಾರ್ಸೆಲೊ ಬ್ಬೋಯ್ ಹೇಳಿದ್ದಾರೆ.
PublicNext
25/03/2022 06:44 pm