ನ್ಯೂಯಾರ್ಕ್:ಸೋಷಿಯಲ್ ಮೀಡಿಯಾದಲ್ಲಿ ಏನ್ ಬೇಕಾದರೂ ಆಗಬಹುದು. ಆದರೆ, ತಂದೇನೆ ಮಗನಿಗೆ ಚಳ್ಳೆ ಹಣ್ಣು ತಿನ್ನಿಸಿರೋ ಘಟನೆ ನಿಜಕ್ಕೂ ಅಪರೂಪ ಅನಿಸುತ್ತದೆ. ಇದನ್ನ ಕೇಳಿದ್ರೆ ಆಶ್ಚರ್ಯ ಅನಿಸಬಹುದು. ಆದರೆ ಇದು ಸತ್ಯ. ವಿಶೇಷ ಅಂದ್ರೆ ಇದು ಸಿನಿಮಾ ಕೂಡ ಆಗಿದೆ.
ಹೌದು. ಐ ಲವ್ ಮೈ ಡ್ಯಾಡ್ ಚಿತ್ರವೇ ಅದಾಗಿದೆ. ವಿಷಯ ಇಷ್ಟೆ. ಅಪ್ಪನನ್ನ ಮಗ ಫೇಸ್ ಬುಕ್ ನಲ್ಲಿ ಬ್ಲಾಕ್ ಮಾಡಿದ್ದಾನೆ. ಇದನ್ನ ತಿಳಿದ ಅಪ್ಪ 'ಬೆಕ್ಕಾ' ಹೆಸರಿನ ಹುಡುಗಿ ಹೆಸರಲ್ಲಿ ಫೇಸ್ ಬುಕ್ ಅಕೌಂಟ್ ಮಾಡಿದ್ದಾನೆ. ಮಗನಿಗೂ ಜೊತೆಗೂ ಫ್ರೆಂಡ್ ಆಗಿಯೇ ಮುಂದುವರೆದಿದ್ದಾನೆ. ಮೂರು ನಾಲ್ಕು ತಿಂಗಳು ಚಾಟಿಂಗ್-ಲವ್ವಿಂಗ್-ಎಲ್ಲವೂ ಆಗಿದೆ.
ಆದರೆ, ಕೊನೆಗೆ ಮಗನಿಗೆ ಇದು ಹುಡುಗಿ ಅಲ್ಲ ಅಪ್ಪ ಅಂತ ತಿಳಿದು ಬಿಟ್ಟಿದೆ. ಈ ಸತ್ಯ ಘಟನೆಯ ಆ ಮಗ ಮಿಸ್ಟರ್ ಜೇಮ್ಸ್ ಮೊರೋಸಿಸ್ ತನ್ನದೇ ಈ ಕತೆಯನ್ನ ಐ ಲವ್ ಮೈ ಡ್ಯಾಡ್ ಹೆಸರಿನಲ್ಲಿ ಚಿತ್ರ ನಿರ್ಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಾಟ್ ಮಾಡುವಾಗ ಫ್ರೆಂಡ್ ಮಾಡಿಕೊಳ್ಳುವಾಗ ಹುಷಾರ್ ಆಗಿರಿ, ಇಲ್ಲ ಅಂದ್ರೆ ನನ್ನ ತಂದೆ ರೀತಿ ಕಿಲಾಡಿ ಅಪ್ಪಂದಿರೂ ಇರ್ತಾರೆ ಅಂತಲೂ ಹಾಸ್ಯ ಚಟಾಕಿ ಹಾರಿಸಿದ್ದಾರೆ.
PublicNext
24/03/2022 10:34 am