ಚೆನ್ನೈ: ಬಾಲಕಿಯ ಹೆಸರು ಜಿಯಾ ರೈ. ಕೇವಲ 13 ವರ್ಷದ ಬಾಲಕಿ.ಶ್ರೀಲಂಕಾದಿಂದ ತಮಿಳುನಾಡಿಗೆ ಕೇವಲ 13 ಗಂಟೆಯಲ್ಲಿ ಈಜಿ ಎಲ್ಲರ ಪ್ರಶಂಸೆಗೆ ಈಗ ಪಾತ್ರಳಾಗಿದ್ದಾಳೆ.
ಜಿಯಾ ಸ್ವಿಮಿಂಗ್ ಮಾಡಿದ ಸಮುದ್ರ ಸಾಮಾನ್ಯ ಸಮುದ್ರ ಅಲ್ಲ ಬಿಡಿ. ಇಲ್ಲಿ ಶಾರ್ಕ್ ಗಳಿವೆ. ಹಾವುಗಳೂ ಇವೆ. ಅಷ್ಟೇ ಯಾಕೆ ಜೆಲ್ಲಿ ಮೀನುಗಳೂ ಇವೆ. ಇಂತಹ ಸಮುದ್ರದಲ್ಲಿ ಶ್ರೀಲಂಕಾದ ತಲೈಮನ್ನಾರ್‌ನಿಂದ ತಮಿಳುನಾಡಿನ ಧನುಷ್ಕೋಡಿಯ ಅರಿಚಲ್ಮುನ್ಯೆವರೆಗೂ 28.5 ಕಿ.ಮೀ ಸ್ವಿಮಿಂಗ್‌ಮಾಡಿದ್ದಾಳೆ.
ಅಂದ್ಹಾಗೆ ಈಕೆ ಮುಂಬೈ ಮೂಲದ ಹುಡುಗಿ. ನೌಕಾಪಡೆಯ ಅಧಿಕಾರಿ ಮಗಳೂ ಕೂಡ ಹೌದು.ಮಗಳ ಈ ಆಸೆಗೆ ತಂದೆ ಪ್ರೋತ್ಸಾಹ ನೀಡಿದ್ದಾರೆ.ಭಾರತ ಮತ್ತು ಶ್ರೀಲಂಕಾದ ಅನುಮತಿ ಪಡೆದು ಕಳೆದ ಭಾನುವಾರ 20 ರಂದು ಜಿಯಾ ಸ್ವಿಮಿಂಗ್ ಮಾಡಿದ್ದಾಳೆ.ಬೆಳಗ್ಗೆ 4.22 ಸ್ವಿಮಿಂಗ್ ಶುರು ಮಾಡಿದ್ದಾಳೆ. ಸಂಜೆ 5.32 ಕ್ಕೆ ತಮಿಳುನಾಡು ತಲುಪಿದ್ದಾಳೆ.
ಈಕೆಯ ಈ ಸಾಧನೆಯನ್ನ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಶೈಲೇಂದ್ರ ಬಾಬು ಕೂಡ ಮೆಚ್ಚಿಕೊಂಡಿದ್ದಾರೆ. ಎಲ್ಲರ ಎದುರೇ ಕೊಂಡಾಡಿದ್ದಾರೆ.
PublicNext
21/03/2022 12:07 pm