ದಾವಣಗೆರೆ: ಗ್ರಾಮ ಪಂಚಾಯಿತಿ ಅಧಿಕಾರಿಗಳ ಯಡವಟ್ಟಿನಿಂದ ಜನರು ಸಮಸ್ಯೆ ಎದುರಿಸುವಂತಾಗಿದ್ದು, ಹರಿಹರ ತಾಲೂಕಿನ ಮಳಲಹಳ್ಳಿಯಲ್ಲಿ ಗ್ರಾಮದ ಮುಖ್ಯ ರಸ್ತೆಯನ್ನೇ ಬಂದ್ ಮಾಡಿ ಟೆಂಟ್ ಹಾಕಿಕೊಂಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕಟ್ಟಿಸಿಕೊಟ್ಟಿದ್ದ ಮನೆಗಳ ತೆರವಿಗೆ ತಾಲೂಕು ಆಡಳಿತ ಮುಂದಾಗಿದ್ದು, ತೆರವುಗೊಳಿಸುವ ಎಚ್ಚರಿಕೆ ಬೆನ್ನಲ್ಲೇ ಇಲ್ಲಿನ ನಿವಾಸಿಗಳುವ ಕಂಗಾಲಾಗಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ರಸ್ತೆ ಬಂದ್ ಮಾಡಿ ಟೆಂಟ್ ಹಾಕಿ ಪ್ರತಿಭಟಿಸುತ್ತಿದ್ದಾರೆ.
ಟೆಂಟ್ ಹಾಕಿದ್ದರಿಂದ ನಂದಿಗುಡಿ, ತುಮ್ಮಿನಕಟ್ಟಿ ಬಸ್ ಸಂಚಾರವೇ ಬಂದ್ ಆಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗ್ರಾಮದಲ್ಲಿ 38 ವರ್ಷಗಳ ಹಿಂದೆ ವಸತಿ ಯೋಜನೆಯಡಿ ಮನೆಗಳನ್ನ ಸರ್ಕಾರ ನೀಡಿತ್ತು. ಹಕ್ಕು ಪತ್ರಗಳನ್ನು ನೀಡಲಾಗಿದೆ. ಮನೆ ಕಂದಾಯ ಕಟ್ಟುತ್ತ ಮನೆಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಆದ್ರೆ, ಮನೆಗಳ ಪಕ್ಕದ ಜಮೀನು ಮಾಲೀಕನಿಂದ ಈಗ ಆಕ್ಷೇಪ ವ್ಯಕ್ತವಾಗಿದೆ. ಜಮೀನು ಒತ್ತುವರಿ ಮಾಡಿ ಮನೆ ಕಟ್ಟಲಾಗಿದೆ ಎಂದು ಕೋರ್ಟ್ ನಲ್ಲಿ ಕೇಸ್ ಹಾಕಿದ್ದಾರೆ. ಕೇಸ್ ಹಿನ್ನೆಲೆ ಕೋರ್ಟ್ ನಿಂದ ಮನೆಗಳ ತೆರವಿಗೆ ಸೂಚನೆ ನೀಡಲಾಗಿದೆ. ಇದು ಜನರಿಗೆ ಸಮಸ್ಯೆ ತಂದೊಡ್ಡಿದೆ.
PublicNext
12/03/2022 07:13 pm