ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೋಷಕರನ್ನ ಕಳೆದುಕೊಂಡ ಉಕ್ರೇನ್‌ ಬಾಲಕನ ಮುಗಿಲು ಮುಟ್ಟಿದ ಆಕ್ರಂದನ

ಕೀವ್:ರಷ್ಯಾ ಉಕ್ರೇನ್ ಮೇಲೆ ನಡೆಸಿದ ದಾಳಿಯಿಂದ ಇಡೀ ಉಕ್ರೇನ್ ತತ್ತರಿಸುತ್ತಿದೆ. ಉಕ್ರೇನ್‌ನ ಕ್ರೀವ್ ಪ್ರದೇಶದಲ್ಲಿ ಬಾಂಬ್ ದಾಳಿ ಕೂಡ ನಡೆದಿದೆ.ಆದರೆ ವಿಷಯ ಇದಲ್ಲವೇ ಅಲ್ಲ. ಈ ಬಾಂಬ್ ದಾಳಿಗೆ ಪೋಷಕರನ್ನ ಕಳೆದುಕೊಂಡ ಬಾಲಕನೊಬ್ಬ ಆಕ್ರಂದನ ಮುಗಿಲು ಮುಟ್ಟಿದೆ. ಸಮಾಧಾನ ಮಾಡಲೂ ಅಲ್ಲಿ ಯಾರೂ ಇಲ್ಲ.

ಹೌದು! ಉಕ್ರೇನ್ ಜನ ಜೀವನ ನಿಜಕ್ಕೂ ದುಸ್ತರ ಆಗಿದೆ. ರಷ್ಯಾ ಸೇನೆ ಇಡೀ ಕೀವ್ ನಗರವನ್ನ ಆವರಿಸಿಕೊಂಡಿದೆ. ಬಾಂಬ್ ದಾಳಿನೂ ನಡೆಸಿದ್ದಾರೆ. ಆದರೆ ಬಾಂಬ್ ದಾಳಿಯಿಂದ ಪೋಷಕರನ್ನ ಕಳೆದುಕೊಂಡ ಬಾಲಕನ ನೋವು ಹೇಳತೀರದು. ಅಮ್ಮ-ಅಪ್ಪನನ್ನ ಕಳೆದುಕೊಂಡ ಈ ಬಾಲಕನನ್ನ ಸಂತಸಲೂ ಇಲ್ಲಿ ಯಾರೂ ಇಲ್ಲ.

ಈ ಮನಕಲಕುವ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನೋಡುಗರ ಮನದಲ್ಲೂ ಅತೀವ ದುಃಖವನ್ನ ಉಂಟು ಮಾಡುತ್ತಿದೆ.

Edited By : Nagesh Gaonkar
PublicNext

PublicNext

26/02/2022 06:34 pm

Cinque Terre

92.99 K

Cinque Terre

7