ತಿರುವನಂತಪುರಂ: ಇತ್ತಿಚೆಗೆ ತಮ್ಮ ನೆಚ್ಚಿನ ಪ್ರಾಣಿ ಪಕ್ಷಿಗಳ ಬರ್ತ್ ಡೇ ಮಾಡುವ ಸುದ್ದಿಗಳನ್ನು ಅಲ್ಲಲ್ಲಿ ನೋಡುತ್ತಿದ್ದೇವೆ.
ಸದ್ಯ ಇಲ್ಲೊಬ್ಬ ರೈತ ತಮ್ಮ ಮಕ್ಕಳಂತೆ ಸಾಕಿದ ಎಮ್ಮೆಯ ಹಟ್ಟು ಹಬ್ಬ ಆಚರಿಸಿ ಸುದ್ದಿಯಾಗಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ರೈತ ತೊಡಿಕಾಪುಲಂನ ಬಶೀರ್ ಅವರು ಬರೋಬ್ಬರಿ ಸಾವಿರ ಕೆಜಿಗೂ ಅಧಿಕ ತೂಕದ ಎಮ್ಮೆಯನ್ನು ಸಾಕಿದ್ದಾರೆ.
ಸದ್ಯ ಮುದ್ದಿನ ಎಮ್ಮೆ ರಾಜಮಾಣಿಕ್ಯನ್ ಗೆ ನಾಲ್ಕನೇ ವರ್ಷದ ಜನ್ಮದಿನ ಹಾಗಾಗಿ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಬರ್ತ್ಡೇ ಆಚರಣೆ ಮಾಡಿದ್ದಾರೆ. ಎಮ್ಮೆಯ ಹುಟ್ಟುಹಬ್ಬದ ಅಂಗವಾಗಿ ವಾರ್ಡ್ ಸದಸ್ಯೆ ಶಿಜಿಮೋಳ್ ಕೇಕ್ ಕತ್ತರಿಸಿದ್ದು, ಎಮ್ಮೆಯ ಹುಟ್ಟು ಹಬ್ಬವನ್ನು ರೈತ ಅತ್ಯಂತ ಪ್ರೀತಿಯಿಂದ ಸೆಲೆಬ್ರೆಟ್ ಮಾಡಿದ್ದಾರೆ.
ಇನ್ನು ಮುರ್ರಾ ತಳಿಯ ಈ ಎಮ್ಮೆಯನ್ನು ಕೊಳ್ಳಲು ಈಗಾಗಲೇ ಅನೇಕರು 10 ಲಕ್ಷ ರೂ. ವರೆಗೂ ಬೇಡಿಕೆ ಇಟ್ಟಿದ್ದಾರೆ. ಆದ್ರೆ ರೈತ ಮಾತ್ರತನ್ನ ನೆಚ್ಚಿನ ಎಮ್ಮೆಯನ್ನು ಮಾರಲು ಮನಸ್ಸು ಮಾಡಿಲ್ಲ.
PublicNext
05/02/2022 03:45 pm