ಮಡಿಕೇರಿ: ಇಂದು ವಯೋಸಹಜ ಕಾಯಿಲೆಯಿಂದ ಕೊಡಗಿನ ಹಿರಿಯರ ಸಾಹಿತಿ ಲೇಖಕ ಎನ್.ಎಸ್.ದೇವಿಪ್ರಸಾದ್ ನಿಧನರಾಗಿದ್ದಾರೆ.
ಕಳೆದೆರಡು ದಿನಗಳಲ್ಲಿ ಜಾನಪದ ಕಲಾವಿದ ಬಸವಲಿಂಗಯ್ಯ, ಹಿರಿಯ ಸಾಹಿತಿ ಡಾ.ಚಂದ್ರಶೇಖರ ಪಾಟೀಲ ಕೊಡಗಿನ ಹಿರಿಯರ ಸಾಹಿತಿ ಲೇಖಕ ಎನ್.ಎಸ್.ದೇವಿಪ್ರಸಾದ್ ನಿಧನದ ಸುದ್ದಿ ನಿಜಕ್ಕೂ ಬರಸಿಡಿಲು ಬಡಿದಂತಾಗಿದೆ.
ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ದೇವಿಪ್ರಸಾದ್ ಅವರು ನೆಲೆಸಿದ್ದರು. ಇವರ ನಿರ್ಮಾಣದ ‘ಮೂರು ದಾರಿಗಳು’ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಸಹ ಲಭಿಸಿತ್ತು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ದೇವಿಪ್ರಸಾದ್ ಕಾರ್ಯ ನಿರ್ವಹಿಸಿದ್ದರು.
ಸಂಪಾಜೆಯಲ್ಲಿ ಸಹಕಾರಿ ಮತ್ತು ಶಿಕ್ಷಣ ಕ್ಷೇತ್ರಗಳ ಬೆಳವಣಿಗೆಗೆ ದೇವಿಪ್ರಸಾದ್ ಕೊಡುಗೆ ಅಪಾರವಾಗಿದೆ. ಕೆಲದಿನಗಳ ಅನಾರೋಗ್ಯದ ಬಳಿಕ ದೇವಿಪ್ರಸಾದ್ ಅವರು ಕಳೆದ ಜನವರಿ 3 ರಂದು ಸುಳ್ಯ ತಾಲೂಕಿನಲ್ಲಿ ಆಯೋಜನೆ ಮಾಡಿದ ಅರೆಭಾಷೆ ಸಂಸ್ಕೃತಿ ಅಕಾಡೆಮಿ ಕಡೆಯಿಂದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರನ್ನು ಗೌರವಿಸಲಾಗಿತ್ತು. ಆದರೆ ಇಂದು ಮಧ್ಯಾಹ್ನ ದೇವಿಪ್ರಸಾದ್ ಅವರು ತಮ್ಮ 79ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
PublicNext
10/01/2022 04:36 pm