ಶ್ರೀನಗರ: ಚಳಿಗಾಲದಲ್ಲಿ ನಮ್ಮ ಮೈಗೆ ಒಂಚೂರು ತಣ್ಣನೆಯ ಗಾಳಿ ಸೋಕಿದ್ರೆ ಸಾಕು ಅರೆಕ್ಷಣ ಕಂಪಿಸಿಬಿಡ್ತೀವಿ. ಆದ್ರೆ ದೇಶ ಕಾಯುವ ನಮ್ಮ ಹೆಮ್ಮೆತ ಯೋಧರು ಹಾಗಲ್ಲ.
ದಟ್ಟ ಮಂಜು ಬೀಳುತ್ತಿದ್ದರು ಗಟ್ಟಿಯಾಗಿ ನಿಂತು ಯೋಧರೊಬ್ಬರು ಡ್ಯೂಟಿ ಮಾಡ್ತಾ ಇರುವ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಅಪಾರ ಜನಮೆಚ್ಚುಗೆ ಗಳಿಸಿದೆ. ಮೊಣಕಾಲುವರೆಗೆ ಆವರಿಸಿದ ಹಿಮವನ್ನೂ ಲೆಕ್ಕಿಸದ ಈ ಯೋಧ ಕೊಂಚವೂ ಅಲ್ಲಾಡದೇ ಹೈ ಅಲರ್ಟ್ ಆಗಿ ಗಡಿ ಕಾಯುತ್ತಿದ್ದಾರೆ. ನಿಜವಾದ ಗುಂಡಿಗೆ ಅಂದ್ರೆ ಇದೇ ಅಲ್ವೇ?
ಅಂದ್ ಹಾಗೆ ರಕ್ಷಣಾ ಸಚಿವಾಲಯದ ಉದಂಪುರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
PublicNext
09/01/2022 01:57 pm