ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

22 ವರ್ಷದ ಬಳಿಕ ಅಂಜಲಿಗೆ ಅಮ್ಮ ಸಿಕ್ಕಿಯೇ ಬಿಟ್ಟಳು

ಚಿಕ್ಕಮಗಳೂರು:ಇದೊಂದು ಹೃದಯ ಸ್ಪರ್ಶಿ ಸುದ್ದಿ. ಎಲ್ಲ ನ್ಯೂಸ್ ರೀತಿ ಇದು ಅಲ್ಲವೇ ಅಲ್ಲ. ಇಲ್ಲಿ ಅಮ್ಮನ ಅಗಲಿಕೆ ನೋವಿದೆ. ಅಮ್ಮನಿಗಾಗಿಯೇ ಹುಡುಕಾಡಿ ಬೇಸರ ಪಟ್ಟ ದಿನಗಳೂ ಇವೆ.ಸಿನಿಮಾ ಶೈಲಿ ಕಥೆ ಇದಲ್ಲ. ಆದರೆ ಸಿನಿಮಾ ಕಥೆ ಆಗೋ ಕಂಟೆಂಟ್ ಈ ರಿಯಲ್ ಸ್ಟೋರಿಯಲ್ಲಿದೆ. ಬನ್ನಿ, ಹೇಳುತ್ತೇವೆ.

ಅದೊಂದು ದಿನ ಅಮ್ಮ ಸಿಕ್ಕೇಬಿಟ್ಟಳು. ಆಕೆಗಾಗಿ ಹುಡುಕಿದ ಊರಿಲ್ಲ. ಕೇಳಿದ ಜನರೇ ಇಲ್ಲ. ಎಲ್ಲರನ್ನೂ ಕೇಳಿದ್ದೇ ಕೇಳಿದ್ದು. ಆದರೆ ಕೊನೆಗೆ ಅಮ್ಮ ಸಿಕ್ಕಿದ್ದು ಮಾತ್ರ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿಯೇ.

ಅಂಜಲಿ ಅನ್ನೋ ಯುವತಿ 22 ವರ್ಷದ ಬಳಿಕ ಅಮ್ಮನನ್ನ ಸೇರಿದ್ದಾಳೆ.9 ವರ್ಷದವಳಾಗಿದ್ದಾಲೆ ಅಂಜಲಿ ನಾಪತ್ತೆ ಆಗಿದ್ದಳು. ಆದರೆ ಕೇಳರದಲ್ಲಿಯೇ ಅಂಜಲಿ ಮನೆಗೆಲಸ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಳು. ಬಳಿಕ ನೆಲ್ಲಮಣಿಯ ಸಾಜಿಯೊಂದಿಗೆ ಮದುವೇನೆ ಆಗಿದ್ದಳು.

ಆದರೆ ಕಳೆದ 3 ವರ್ಷದ ಹಿಂದೆ ಅಮ್ಮನಿಗಾಗಿಯೇ ಹುಡುಕಾಟ ನಡೆಸಿದ್ದಳು. ಮಂಗಳೂರಿನ ಫಿಶ್‌ಮೋಣು, ಮುಸ್ತಾಫರ ಬಳಿ ಕೂಡ ಅಂಜಲಿ ತಮ್ಮ ತಾಯಿ ಹುಡುಕಿಕೊಡಿ ಅಂತಲೂ ಕೇಳಿಕೊಂಡಿದ್ದಳು.

ಅದರಂತೆ ಮೂಡಿಗೆರೆ ಸುತ್ತ-ಮುತ್ತ ಅಂಜಲಿ ತಾಯಿಗಾಗಿ ಹುಡುಕಾಟವೂ ನಡೆದಿತ್ತು. ಕೊನೆಗೆ ಮೂಡಿಗೆರೆ ಮುದ್ರೆಮನೆ ಗ್ರಾಮದಲ್ಲಿಯೇ ಅಂಜಲಿ ತಾಯಿ ಸಿಕ್ಕಿದ್ದಾಳೆ. ಅಮ್ಮ-ಮಗಳು ಪರಸ್ಪರ ಭೇಟಿ ಆಗಿ ತಬ್ಬಿಕೊಂಡು ಕಣ್ಣೀರಾಗಿದ್ದಾರೆ.ಈ ಕ್ಷಣ ನಿಜಕ್ಕೂ ಹಾರ್ಟ್ ಟಚ್ಚಿಂಗ್ ಆಗಿಯೇ ಇತ್ತು.

Edited By : Shivu K
PublicNext

PublicNext

04/01/2022 04:18 pm

Cinque Terre

76.64 K

Cinque Terre

8

ಸಂಬಂಧಿತ ಸುದ್ದಿ