ನವದೆಹಲಿ: ವಿಜ್ಞಾನಕ್ಕೂ ಸವಾಲೆಸೆಯುವ ಘಟನೆಗಳು ಆಗಾಗ ನಡೆಯುತ್ತ ಇರುತ್ತವೆ. ಈಗ ಅಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ 62 ವರ್ಷ ವಯಸ್ಸಿನ ಸತೀಶ್ ಭಾರಧ್ವಾಜ್ ಎಂಬ ವೃದ್ಧ ಮೃತಪಟ್ಟಿದ್ದಾರೆ ಎಂದು ದೆಹಲಿ ಖಾಸಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ. ಹಾಗೂ ಶವವನ್ನು ಕುಟುಂಬಸ್ಥರಿಗೆ ನೀಡಿದ್ದಾರೆ. ಸಂಬಂಧಿಕರು ಎಲ್ಲ ವಿಧಿವಿಧಾನಗಳನ್ನು ಮುಗಿಸಿ ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಷ್ಟರಲ್ಲಿ ತಾತ ದಿಗ್ಗನೇ ಎಚ್ಚರಗೊಂಡಿದ್ದಾನೆ. ಇದನ್ನು ಕಂಡ ಬಂಧುಗಳು ಹೌಹಾರಿ ಮಾರುದ್ದ ಓಡಿದ್ದಾರೆ. ಕೂಡಲೇ ಅಲ್ಲಿದ್ದ ಕೆಲವರು ಪೊಲೀಸರಿಗೆ ಕರೆ ಮಾಡಿದ್ದಾರೆ.
ಧಾವಿಸಿ ಬಂದ ಪೊಲೀಸರು ಅನುಮಾನ ಕ್ಲಿಯರ್ ಮಾಡಿಕೊಳ್ಳಲು ಸತ್ತಿದ್ದಾರೆಂದು ನಂಬಲಾಗಿದ್ದ ತಾತನನ್ನು ಪುನಃ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ನಾಡಿ ಮಿಡಿತ, ರಕ್ತದೊತ್ತಡವನ್ನು ಪರಿಶೀಲಿಸಿದಾಗ ತಾತ ಇನ್ನೂ ಬದುಕಿರುವುದು ಸ್ಪಷ್ಟವಾಗಿದೆ. ಕೂಡಲೇ ವೈದ್ಯರು ಮತ್ತೊಮ್ಮೆ ಚಿಕಿತ್ಸೆ ನೀಡಲು ಆರಂಭಿಸಿದ್ದು ತಾತ ಈಗ ಆರೋಗ್ಯವಾಗಿದ್ದಾನೆ.
PublicNext
29/12/2021 07:57 am