ಹೈದ್ರಾಬಾದ್: ಮದುವೆ ಅನ್ನೋದು ಸರ್ಗದಲ್ಲಿಯೇ ನಿಶ್ಚಯ ಆಗಿರುತ್ತಂತೆ. ಒಂದು ಗಂಡಿಗೆ ಒಂದು ಹೆಣ್ಣು ಅಂತ ಆ ದೇವರೇ ಜೋಡಿ ಮಾಡಿ ಇಟ್ಟಿರುತ್ತಾನಂತೆ. ಆದರೆ ನಾವು ಹೇಳ್ತೀರೋ ಈ ಮದುವೆ ವಿಶೇಷವಾಗಿಯೆ ಇದೆ.
ಹೌದು ಇದು ವಿಶೇಷ ಮದುವೆನೆ. ಪತಿ ಮತ್ತು ಪತ್ನಿ ಅಂತೀವಲ್ಲ. ಹಾಗೆಲ್ಲ ಈ ಮದುವೆಯಲ್ಲಿ ಹೇಳೋಕೆ ಆಗೋದಿಲ್ಲ. ಪತಿ ಮತ್ತು ಪತಿ ಅಂತಲೇ ಹೇಳಬೇಕು. ಯಾಕಂದ್ರೆ ಇದು ಸಲಿಂಗ ಮದುವೆ.
ಹೈದ್ರಬಾದ್ ನ ಹೊರವಲಯದ ರೆಸಾರ್ಟ್‌ವೊಂದರಲ್ಲಿ ಈ ಮದುವೆ ನೆರವೇರಿದೆ.ಗುರು-ಹಿರಿಯರ ಸಮುಖದಲ್ಲಿಯೇ ಮದುವೆ ಆಗಿದ್ದಾರೆ ಈ ವಿಶೇಷ ಜೋಡಿ.
ಅಂದ್ಹಾಗೆ ಮದುವೆ ಆಗಿರೋ ಇಬ್ಬರಿಗೂ ವಯಸ್ಸಿನಲ್ಲಿ ಅಂತರ ಇದೆ. ಕೋಲ್ಕತಾ ಮೂಲದ ಸುಪ್ರಿಯೋ ಚಕ್ರವರ್ತಿಗೆ 31 ವರ್ಷವಾಗಿದೆ. ಹೋಟೆಲ್ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ನಲ್ಲಿ ಹಿರಿಯ ಅಧ್ಯಾಪಕರಾಗಿದ್ದಾರೆ. ಇವರನ್ನ ಮದುವೆ ಆದ ಹುಡುಗನಿಗೆ 31 ವರ್ಷವಾಗಿದೆ. ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡ್ತಾರೆ.
ಪಂಜಾಬಿ ಮತ್ತು ಬೆಂಗಾಲಿ ಸಂಪ್ರದಾಯದಂತೆ ಇವರು ಎರಡೆರಡು ಸಲ ಮದುವೆ ಆಗಿದ್ದಾರೆ. ಆದರೆ ಭಾರತದಲ್ಲಿ ಸಲಿಂಗ ಮದುವೆಗೆ ಮಾನ್ಯತೆ ಇಲ್ಲ. ಆದರೂ ಇವರು ಮದುವೆ ಆಗಿ ಭಾರತದ ಮೊಟ್ಟ ಮೊದಲ ಸಲಿಂಗ ಜೋಡಿ ಆಗಿದ್ದಾರೆ.
PublicNext
20/12/2021 03:36 pm