ಉತ್ತರಪ್ರದೇಶ: ಸಿಆರ್‌ಪಿಎಫ್ ಯೋಧರು ಹುತಾತ್ಮ ಸಹೋದ್ಯೋಗಿಯ ತಂಗಿಯ ಮದುವೆಗೆ ಬಂದು ಅಣ್ಣನ ಜವಾಬ್ದಾರಿ ಹೊತ್ತು ಎಲ್ಲ ಕೆಲಸ ಮಾಡಿರೋ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ.
ಸಿಆರ್‌ಪಿಎಫ್ ಯೋಧ ಕಾನ್ಸ್‌ಸ್ಟೇಬಲ್ ಶೈಲೇಂದ್ರ ಪ್ರತಾಪ್ ಸಿಂಗ್,ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು.ಅದೇ ಪ್ರತಾಪ್ ಸಿಂಗ್ ಅವರ ಸಹೋದರಿ ಜ್ಯೋತಿಯ ಮದುವೆ ಇದೇ ಡಿಸೆಂಬರ್-13 ರಂದು ನಡೆಯಿತು.
ಈ ಮದುವೆಗೆ ಸಿಆರ್‌ಪಿಎಫ್‌ನ ಯೋಧರು ಆಗಮಿಸಿದ್ದರು. ಗೆಸ್ಟ್ ರೀತಿ ಅವರು ಇಲ್ಲಿ ಓಡಾಡದೇನೇ ಜ್ಯೋತಿಯ ಅಣ್ಣಂದಿರಾಗಿಯೇ ಮದುವೆಯ ಎಲ್ಲ ಶಾಸ್ತ್ರಗಳನ್ನೂ ಮಾಡಿಕೊಟ್ಟಿದ್ದಾರೆ. ಈ ಮೂಲಕ ಸಿಆರ್‌ಪಿಎಫ್‌ಯೋಧರು ಮನೆಮಂದಿ ಹಾಗೂ ಊರ ಜನರ ಹೃದಯ ಗೆದ್ದಿದ್ದಾರೆ.
PublicNext
15/12/2021 12:58 pm