ನವದೆಹಲಿ: ಮುಸ್ಲಿಂ ವ್ಯಕ್ತಿಯೋರ್ವ ಗೋಮಾತೆಯನ್ನು ರಕ್ಷಿಸಿ ಮಾನವೀಯತೆ ತೋರಿದ್ದು, ಆತನ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಆಕಳೊಂದು ರಸ್ತೆ ಗುಂಡಿಯೊಂದರಲ್ಲಿ ಬಿದ್ದು ಅಲ್ಲಿಂದ ಹೊರ ಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಮುಸ್ಲಿಂ ವ್ಯಕ್ತಿ ಗುಂಡಿಗೆ ಇಳಿದು ಮೇಲಕ್ಕೆ ಹತ್ತಲು ಆಕಳಿಗೆ ಸಹಾಯ ಮಾಡಿದ್ದಾನೆ. ಸ್ಥಳದಲ್ಲಿದ್ದ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮುಸ್ಲಿಂ ವ್ಯಕ್ತಿಯ ಕಾರ್ಯಕ್ಕೆ ಮೆಚ್ಚುಗೆ ಹರಿದು ಬಂದಿದೆ.
PublicNext
27/11/2021 10:05 pm