ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮೋವಾದಲ್ಲಿ ಪತ್ನಿ ಜನ್ಮ ದಿನ ಮರೆತರೆ ಏನ್‌ ಆಗ್ತದೆ ಗೊತ್ತೇ ?

ಸಮೋವಾ:ಗಂಡಸರಿಗೆ ಅದ್ಯಾಕೋ ಏನೋ. ಎಲ್ಲವೂ ನೆನಪಿಗೆ ಇರುತ್ತದೆ. ಆದರೆ ಹೆಂಡತಿಯ ಜನ್ಮ ದಿನ ಮಾತ್ರ ನೆನಪಿಗೆ ಬರೋದೇ ಇಲ್ಲ. ಹೀಗೆ ನೀವೂ ಈ ದ್ವೀಪದಲ್ಲಿ ಮರತದ್ದೇ ಆದರೆ, ನಿಮ್ಮ ವೈಫ್ ನಿಮ್ಮನ್ನ ಜೈಲಿಗೆ ಅಟ್ಟಬಹುದು. ಅಂತಹ ಕಾನೂನು ಇಲ್ಲಿದೆ. ಬನ್ನಿ, ಹೇಳುತ್ತೇವೆ.

ಪೆಸಿಫಿಕ್ ಮಹಾಸಾಗರದ ಪಾಲಿನೇಷನ್ ಪ್ರದೇಶದಲ್ಲಿ ಸಮೋವಾ ದ್ವೀಪದಲ್ಲಿ ಈ ಕಾನೂನು ಜಾರಿಯಲ್ಲಿದೆ. ಪತಿ ಹೆಂಡತಿಯ ಜನ್ಮ ದಿನ ಮರೆತರೆ ಪತ್ನಿನೇ ಗಂಡನನ್ನ ಜೈಲಿಗೆ ಕಳಿಸುವಂತಹ ಕಾನೂನು ಇದಾಗಿದೆ.

ಒಂದು ವೇಳೆ ಪತಿ ಫಸ್ಟ್ ಟೈಮ್ ಈ ತಪ್ಪು ಮಾಡಿದರೆ ಉಳಿದುಕೊಳ್ಳುವ ಚಾನ್ಸ್ ಇದೆ. ಎರಡನೇ ಬಾರಿ ಈ ತಪ್ಪು ರಿಪೀಟ್ ಆದರೆ ಜೈಲು ಗ್ಯಾರಂಟಿ. ಹಾಗಂತ ಪತ್ನಿ ಹೇಳೋವವರೆಗೂ ಪೊಲೀಸರು ನಿಮ್ಮನ್ನ ಅರೆಸ್ಟ್ ಮಾಡೋದಿಲ್ಲ ಬಿಡಿ. ಉಳಿದಂತೆ ಈ ಕಾನೂನು ಇಲ್ಲಿ ಇಲ್ಲ ಅನ್ನೋದೇ ಖುಷಿ ಅಲ್ವೇ.

Edited By :
PublicNext

PublicNext

23/11/2021 08:16 pm

Cinque Terre

25.28 K

Cinque Terre

1