ಪರಸ್ಪರರು ಮುತ್ತು ನೀಡುವಾಗ ಕಣ್ಣು ತಾವಾಗಿಯೇ ಮುಚ್ಚಿಕೊಳ್ಳುತ್ತವೆ. ಇದಕ್ಕೆ ಕಾರಣ ಏನು ಎಂದು ಅನೇಕರು ಯೋಚಿಸುತ್ತಿದ್ದರು.
ಸದ್ಯ ಸಂಶೋಧನೆವೊಂದು ಕಣ್ಣುಮುಚ್ಚಲು ಕಾರಣವೇನು ಎಂದು ಬಹಿರಂಗಪಡಿಸಿದೆ.
ಹೌದು ಮೆದುಳು ಮುತ್ತಿನ ಮೇಲೆ ಗಮನ ಕೇಂದ್ರಿಕರಿಸುವಾಗ ಸಹಜವಾಗಿಯೇ ಕಣ್ಣು ಮುಚ್ಚಿಕೊಳ್ಳುತ್ತದೆ. ಮೆದುಳು ಏಕ ಕಾಲದಲ್ಲಿ ಎರಡು ಕಾರ್ಯಗಳನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗದ್ದರಿಂದ ಕಣ್ಣು ಮುಚ್ಚಿಕೊಳ್ಳುತ್ತದೆಯಂತೆ.
ಹಲವರನ್ನು ಈ ಸಂಶೋಧನೆಗೆ ಒಳಪಡಿಸಿದ ವೇಳೆ, ಕಣ್ಣು ತೆರೆದು ಮುತ್ತಿಕ್ಕಿದವರು ಪರಿಪೂರ್ಣತೆಯನ್ನು ಅನುಭವಿಸದಿರುವುದು ಕಂಡು ಬಂದಿದ್ದರೆ, ಕಣ್ಮುಚ್ಚಿಕೊಂಡು ಮುತ್ತಿಕ್ಕಿದವರು ಮತ್ತಿನಲ್ಲಿ ತೇಲಾಡಿದ್ದಾರೆ. ಒಟ್ಟಿನಲ್ಲಿ ‘ಮುತ್ತಿನ ಮತ್ತೇ ಗಮ್ಮತ್ತು’ ಎನ್ನುವವರಿಗೆ ಕಣ್ಣು ಮುಚ್ಚಿಕೊಳ್ಳುವ ಕಾರಣ ತಿಳಿದಂತಾಗಿದೆ.
PublicNext
23/11/2021 04:44 pm