ಚಿಕ್ಕಮಗಳೂರು: ಭಿಕ್ಷುಕರನ್ನು ಕಂಡರೆ ಸಾಮಾನ್ಯವಾಗಿ ನಾವೆಲ್ಲಾ ಅಸಡ್ಡೆ ಮಾಡುತ್ತೇವೆ. ಆದರೆ ಇಲ್ಲೋರ್ವ ಭಿಕ್ಷುಕ ಅಜ್ಜಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.
ಹೌದು. ದೇವಸ್ಥಾನದ ಬಳಿ ಬಂದ ಅಜ್ಜಿ ಆಡಳಿತ ಮಂಡಳಿಯ ಅಧ್ಯಕ್ಷನನ್ನು ಹುಡುಕಾಡಿದ್ದಾರೆ. ಹಣ ಕೇಳಲು ಬಂದಿದ್ದಾಳೆಂದು ಭಾವಿಸಿ ಎಲ್ಲರೂ ಭಿಕ್ಷುಕಿಯನ್ನು ಹೋಗಮ್ಮ ಇಲ್ಲಿಂದ ಎಂದು ಬೈದಿದ್ದಾರೆ. ಅಷ್ಟರಲ್ಲೇ ಆ ಅಜ್ಜಿ ಸೀದಾ ದೇವಸ್ಥಾನದ ಒಳಗೆ ಹೋಗಿ ಸ್ವಾಮೀಜಿ ಕೈಗೆ 500ರ 20 ನೋಟು ಕೊಟ್ಟಿದ್ದಾರೆ. ಇದನ್ನು ನೋಡುತ್ತಿದ್ದ ಮಂದಿ ಒಂದು ಕ್ಷಣ ಬೆರಗಾಗಿ ಬಿಟ್ಟರು. 'ಈ ಹಣದಲ್ಲಿ ಆಂಜನೇಯನಿಗೆ ಬೆಳ್ಳಿಯ ಮುಖವಾಡ ಮಾಡಿಸಿ' ಎಂದು ಅಜ್ಜಿ ಹೇಳಿದಾಗ, ಅಜ್ಜಿಯ ದೊಡ್ಡತನಕ್ಕೆ ನೆರೆದಿದ್ದವರೆಲ್ಲಾ ಶಾಕ್ ಆಗಿದ್ದಂತು ಸತ್ಯ.
ಇಂತದೊಂದು ಘಟನೆಗೆ ಸಾಕ್ಷಿಯಾಗಿದ್ದು, ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ಸ್ವಾಮಿ ದೇವಸ್ಥಾನ. ಕಡೂರಿನ ಸಾಯಿಬಾಬಾ ದೇವಸ್ಥಾನದ ಬಳಿ ಭಿಕ್ಷೆ ಬೇಡುವ ಕೆಂಪಜ್ಜಿ ತಾನು ಭಿಕ್ಷೆ ಬೇಡಿದ ಹಣದಿಂದ ದೇವಸ್ಥಾನಕ್ಕೆ ದೇಣಿಗೆ ಕೊಟ್ಟು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ನಂತರ ಭಿಕ್ಷುಕಿ ಅಜ್ಜಿ ದೇವಸ್ಥಾನದ ಮುಂದೆ ಸೆಲ್ಫಿಗೆ ಫೋಸ್ ನೀಡಿದ್ರು. ಸಾವಿರ ಜನ ಲಕ್ಷ ಕೊಟ್ರು ಈ ಬಡಪಾಯಿ ಅಜ್ಜಿಯ ಭಕ್ತಿಯ ಮುಂದೆ ಅದೆಲ್ಲವು ನಗಣ್ಯ ಅನ್ನುವುದು ಸಾಬೀತು ಆದಂತಾಗಿದೆ.
PublicNext
23/11/2021 12:12 pm