ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಕ್ ಡೌನ್ ಬೋರ್ ಆಗಿ ಗೋಡೆ ಕಟ್ಟಿದ ಮಹಾವೀರ

ಸಿಡ್ನಿ: ವಿಚಿತ್ರ ಅನಿಸಿದರೂ ಇದು ಸತ್ಯ.ಸಿಡ್ನಿಯಲ್ಲಿ ಆಲಿ ಅನ್ನೋ ವ್ಯಕ್ತಿ ಮನೆ ಗಾರ್ಡನ್ ಸುತ್ತ 18 ಅಡಿ ಎತ್ತರದ ಗೋಡೆ ಕಟ್ಟಿದ್ದಾನೆ. ಆದರೆ ಯಾಕೆ ಈ ಗೋಡೆ ಕಟ್ಟಿದ್ದಾನೆ ಅನ್ನೋದೇ ವಿಶೇಷ. ಅದನ್ನ ನಾವ್ ಹೇಳ್ತೀವಿ ಬನ್ನಿ.

ಕೋವಿಡ್ ಎಲ್ಲರ ಜೀವನವನ್ನ ಅಸ್ತವ್ಯಸ್ತಗೊಳಿಸಿದೆ. ಇಂಡಿಯಾ ಅಷ್ಟೇ ಅಲ್ಲ.ಸಿಡ್ನಿ ಜನ ಕೂಡ ಲಾಕ್ ಡೌನ್‌ಗೆ ತತ್ತರಿಸಿ ಹೋಗಿದ್ದಾರೆ. ಹಾಗೆ ತತ್ತರಿಸಿದವರಲ್ಲಿ ಸಿಡ್ನಿಯ ಈ ಆಲಿ ಕೂಡ ಒಬ್ಬರು. ಲಾಕ್ ಡೌನ್ ನಲ್ಲಿ ಮನೆಯಲ್ಲಿಯೇ ಇದ್ದು ಬೋರ್ ಆಗಿದೆ. ಸುಮ್ಮನೆ ಕುಳಿತು ಏನು ಮಾಡೋದು ಅಂತಲೇ,ಮನೆ ಗಾರ್ಡ್ನ್ ಸುತ್ತಲೂ 18 ಎತ್ತರದ ಗೋಡೆ ಕಟ್ಟಿದ್ದಾನೆ.

ಈ ಗೋಡೆಯ ಒಂದು ಭಾಗದಲ್ಲಿ ವಿಶೇಷ ಚಿತ್ರಗಳನ್ನ ಬಿಡಿಸಿ ಸುಂದರವಾಗಿಸಿದ್ದಾನೆ. ಮತ್ತೊಂದು ಭಾಗದಲ್ಲಿ ಬೇರೆ ರೀತಿಯ ಚಿತ್ರಗಳನ್ನ ಬಿಡಿಸಿ ಅದ್ಭುತವಾಗಿಯೇ ಕಾಣೋ ರೀತಿ ಮಾಡ್ಬೇಕು ಅಂದುಕೊಂಡಿದ್ದ. ಆದರೆ ಈಗ ಈ ಎತ್ತರ ಗೋಡೆನೆ ಇಲ್ಲ. ಯಾಕೆಂದ್ರೆ ಪಕ್ಕದ ಮನೆಯವರು ತಕರಾರು ತೆಗೆದಿದ್ದಾರೆ. ಈ ಗೋಡೆಯಿಂದ ನಮಗೆ ತೊಂದರೆ ಆಗಿದೆ. ಏನಂದ್ರೆ ಏನೂ ಕಾಣೋದೇಯಿಲ್ಲ. ಗೋಡೆಯಿಂದ ಬರೀ ತಂತಿಗಳೇ ಕಾಣುತ್ತಿವೆ ಅಂತಲೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಅದಕ್ಕೇನೆ ಆಲಿ ಕಟ್ಟಿದ ಈ ಚೆಂದದ ಗೋಡೆ ಈಗ ನೆಲಸಮ ಆಗಿದೆ.

Edited By :
PublicNext

PublicNext

17/11/2021 06:54 pm

Cinque Terre

25.71 K

Cinque Terre

0

ಸಂಬಂಧಿತ ಸುದ್ದಿ