ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಷ್ಟಕ್ಕೆ ನೆರವಾದ ಆಟೋ ವಾಲಾಗೆ 1 ಕೋಟಿ ಆಸ್ತಿ ದಾನ ಮಾಡಿದ ಮಹಿಳೆ

ಭುವನೇಶ್ವರ:ಆಟೋ ಎಳೆಯುವ ವ್ಯಕ್ತಿಗೆ ತನ್ನ 1 ಕೋಟಿ ಆಸ್ತಿಯನ್ನ ಬರೆದುಕೊಟ್ಟಿದ್ದಾರೆ. ಹೌದು.25 ವರ್ಷಗಳಿಂದ ಆಟೋ

ಸೇವೆ ನೀಡುತ್ತಿದ್ದ ಬಡ ವ್ಯಕ್ತಿಗೆ ಶ್ರೀಮಂತ ಒಂಟಿ ಮಹಿಳೆ ಮೂರು ಅಂತಸ್ತಿನ ಮನೆ-ಚಿನ್ನಾಭರಣ ಹೀಗೆ ಒಂದು ಕೋಟಿ ಮೌಲ್ಯದ ಆಸ್ತಿ ದಾನ ಮಾಡಿರೋ ಘಟನೆ ಒಡಿಶಾದಲ್ಲಿ ನಡೆದಿದೆ.

ಈ ಕಾಲದಲ್ಲಿ ಇದೆಲ್ಲ ಹೇಗೆ ಸಾಧ್ಯ ಅಂತ ನಿಮಗೆ ಅನಿಸಬಹುದು. ನಿಜ, ಆದರೆ ದಾನ ಮಾಡಿದ ಮಿನಾತಿ ಪಟ್ನಾಯಕ್ ಹೆಸರಿನ ಮಹಿಳೆಗೆ ಇದ್ದ ಒಬ್ಬ ಪುತ್ರ ಹಾಗೂ ಪುತ್ರಿ ಇಬ್ಬರೂ ಇತ್ತೀಚೆಗೆ ತೀರಿ ಹೋಗಿದ್ದಾರೆ.ಅನಾರೋಗ್ಯದಿಂದ ಬಳಲಿದ ಈ ಮಹಿಳೆಯನ್ನ ನೋಡಿಕೊಂಡವ್ರು ಇದೇ ಆಟೋ ಎಳೆಯುವ ಕುಟುಂಬದ ಜನರೇ. ಅದಕ್ಕೇನೆ ಈ ಮಹಿಳೆ ಸಾಯುವ ಮುಂಚೇನೆ ಬುಧ ಸಮಾಲ್ ಹೆಸರಿನ ಈ ಆಟೋ ಎಳೆಯುವ ವ್ಯಕ್ತಿಯ ಹೆಸರಿಗೆ ತಮ್ಮ ಆಸ್ತಿ ಬರೆದಿದ್ದಾರೆ.

Edited By :
PublicNext

PublicNext

15/11/2021 05:42 pm

Cinque Terre

26.1 K

Cinque Terre

5