ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಇವರು ಕಡಲ ತಡಿಯ ಆಪತ್ಭಾಂಧವ!

ವಿಶೇಷ ವರದಿ: ರಹೀಂ ಉಜಿರೆ

ಮಲ್ಪೆ: ಸಮಾಜಸೇವೆಗೆ ನೂರಾರು ಮುಖ. ಪರೋಪಕಾರ ಮಾಡಲು ಮನಸು ಇರಬೇಕಷ್ಟೆ. ಮಲ್ಪೆಯ ಮುಳುಗುತಜ್ಞ ಈಶ್ವರ್ ಮಲ್ಪೆ ,ನಿಜ ಅರ್ಥದ ಕಡಲ ತೀರದ ಆಪತ್ಭಾಂಧವ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ,ಇಬ್ಬರು ಅಂಗವಿಕಲ ಮಕ್ಕಳನ್ನಿಟ್ಟುಕೊಂಡು 24*7 ಆಪದ್ಭಾಂಧವನಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

ನೀವು ನಂಬಲಿಕ್ಕಿಲ್ಲ ,ಉಡುಪಿ ಆಸುಪಾಸಿನಲ್ಲಿ ಈಶ್ವರ್ ಇದುವರೆಗೂ 20 ಕ್ಕೂ ಹೆಚ್ವು ಮಂದಿಯನ್ನು ಸಮುದ್ರದಿಂದ ಮೇಲೆತ್ತಿ ಬದುಕಿಸಿದ್ದಾರೆ. 200ಕ್ಕೂ ಹೆಚ್ಚು ಮೃತದೇಹಗಳನ್ನು ಸಮುದ್ರದಿಂದ ,ನದಿ ,ಬಾವಿಗಳಿಂದ ಮೇಲೆಕ್ಕೆತ್ತಿದ್ದಾರೆ! ಹಾಗಂತ ಈಶ್ವರ್ ಮಲ್ಪೆ ಈ ಮಾನವೀಯ ಕಾರ್ಯಕ್ಕೆ ಸಂಭಾವನೆ ನಿರೀಕ್ಷಿಸುವುದಿಲ್ಲ! ಬೋಟ್ ಗೆ ನೀರು ಹಾಕುವ ಕೆಲಸ ಮಾಡುವ ಇವರದ್ದು ಕಿತ್ತು ತಿನ್ನುವ ಬಡತನ .ಇವರ ಇಬ್ಬರು ಗಂಡುಮಕ್ಕಳೂ ಅಂಗವಿಕಲರು ಎಂದರೆ ನೀವು ನಂಬಲೇಬೇಕು! ಹೌದು ,ಇಬ್ಬರು ಮಕ್ಕಳು ಹಾಸಿಗೆ ಹಿಡಿದಿದ್ದರೂ ,ಇವರು ಮಾತ್ರ ಸದಾ ಪರೋಪಕಾರದಲ್ಲಿ ಬ್ಯುಸಿ. ದುರಂತಗಳಲ್ಲಿ ಮಡಿದವರ ಹೆಣ ಮನೆಯವರಿಗೆ ತುಂಬ‌ ಮುಖ್ಯ.ಗಂಡನಿಗೆ ಹೆಂಡತಿ ,ತಂದೆಗೆ ಮಗ , ಮಗನಿಗೆ ತಂದೆ ಮೃತದೇಹ ಬಹಳ ಮಹತ್ವದ್ದು. ಹಿಂದೆಲ್ಲ ಮೃತದೇಹಗಳನ್ನು ನೀರಿಗೇ ದೂಡುತ್ತಿದ್ದರು. ನಾನಿದನ್ನು ನೋಡಿ‌ ಮೃತದೇಹವನ್ನಾದರೂ ಮನೆಯವರಿಗೆ ತಲುಪಿಸಬೇಕು ಎಂಬ ಕಾರಣಕ್ಕೆ ಈ‌ ಮಾನವೀಯ ಕೆಲಸಕ್ಕೆ ಇಳಿದೆ ಎನ್ನುತ್ತಾರೆ ಈಶ್ವರ್.

ಪರಿಶ್ರಮ ಮತ್ತು ಕಠಿಣ ಅಭ್ಯಾಸದಿಂದ ಈಶ್ವರ್ ಮುಳುಗುತಜ್ಞರಾದವರು. ದಿನ ಅಥವಾ ರಾತ್ರಿಯ ಯಾವುದೇ ಹೊತ್ತಿನಲ್ಲಿಯೂ ಅವರಿಗೆ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿಕೊಂಡವರ ರಕ್ಷಣೆಗೆ ಕರೆ ಬರುತ್ತದೆ. ತಕ್ಷಣವೇ ಅವರು ಹೊರಟು ನಿಲ್ಲುತ್ತಾರೆ.ಇಷ್ಟುದಿನ ಆಕ್ಸಿಜನ್ ಸಿಲಿಂಡರ್ ಸಹಾಯವಿಲ್ಲದೆ ಅವರು ಮುಳುಗು ಹಾಕುತ್ತಿದ್ದರು. ಆದರೆ ಕೆಲಸಮಯದಿಂದ ಆಕ್ಸಿಜನ್ ಸಿಲಿಂಡರ್ ಸೂಟ್ ಧರಿಸುತ್ತಾರೆ. ಜೀವರಕ್ಷಕ ದಳ, ಪೊಲೀಸರು ಕೂಡಾ ಇವರ ಸಹಾಯ ಕೋರಿ ಕರೆ ಮಾಡುತ್ತಾರೆ. ಯಥೇಚ್ಛ ಮಳೆ ಬೀಳುವ ಪ್ರದೇಶವಾಗಿರುವುದರಿಂದ ಅನೇಕ ಸಂದರ್ಭಗಳಲ್ಲಿ ನದಿ, ತೊರೆಗಳು ಮೈದಂಬಿ ಹರಿಯುತ್ತಿರುವ ಸಮಯದಲ್ಲೂ ರಕ್ಷಣಾ ಕಾರ್ಯಕ್ಕೆ ಧುಮುಕುತ್ತಾರೆ. ಈಶ್ವರ್ ಮಾನವೀಯ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುತ್ತಾರೆ ಊರವರು.

ಕಳೆದ 15 ವರ್ಷಗಳಿಂದ ಹಲವು ಅಪಾಯಕಾರಿ ಸನ್ನಿವೇಶಗಳಲ್ಲಿಯೂ ಆವರು ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ಹಲವರ ಜೀವ ಉಳಿಸಿದ್ದಾರೆ.ನದಿ ,ಸಮುದ್ರ,ಬಾವಿ ಹೀಗೆ ಎಲ್ಲೇ ಜನರು‌ ಮುಳುಗಿದರೂ ಈಶ್ವರ್ ಅಲ್ಲಿ ಪ್ರತ್ಯಕ್ಷ! ಇವರ ಮಾನವೀಯ ಕಾರ್ಯ ನಿಜಕ್ಕೂ ಶ್ಲಾಘನೀಯ.

Edited By : Manjunath H D
PublicNext

PublicNext

08/11/2021 06:00 pm

Cinque Terre

28.78 K

Cinque Terre

2