ಇದೊಂದು ಇಂಟ್ರಸ್ಟಿಂಗ್ ಕಥೆ ಇರೋ ಸುದ್ದಿ.ಇಲ್ಲಿ ಮೀನಿಗಾರರು 700 ವರ್ಷಗಳ ಹಿಂದಿನ ಒಂದು ಸಾಮ್ರಾಜ್ಯವನ್ನ ಪತ್ತೆ ಹಚ್ಚಿದ್ದಾರೆ. ಇದು ಅಂತೀತ ಸಾಮ್ರಾಜ್ಯ ಅಲ್ಲವೇ ಅಲ್ಲ. ಮುತ್ತು ರತ್ನ ಚಿನ್ನ ಹೀಗೆ ಅಮೂಲ್ಯವಾದ ವಸ್ತುಗಳ ಸಂಪತ್ತು ಇರೋ ಜಗತ್ತೇ ಇದಾಗಿದೆ.
ಇಂಡೋನೇಷಾದ ಸುಮಾತ್ರಾ ದ್ವೀಪದಲ್ಲಿ ಮೀನುಗಾರರು ಗುಂಪು ಈ ಅವಿಷ್ಕಾರ ಮಾಡಿದೆ. ಕಳೆದ ಐದಾರು ವರ್ಷಗಳಿಂದಲೂ ಇದರ ಹುಡುಕಾಟದಲ್ಲಿಯೇ ಇದ್ದರು ಈ ಮೀನುಗಾರರು. ಆದರೆ ಅದು ಈಗ ಸಾಧ್ಯವಾಗಿದೆ.ಇದೇ ದ್ವೀಪದ ಪಾಲೆಂಬಾಂಗ್ ಸಮೀಪದ ಮುಸಿ ನದಿಯಲ್ಲಿ ಈ ಚಿನ್ನದ ಸಾಮ್ರಾಜ್ಯವನ್ನ ರಾತ್ರಿ ವೇಳೆ ಪತ್ತೆ ಹಚ್ಚಿದ್ದಾರೆ. 8ನೇ ಶತಮಾನದ ಈ ಚಿನ್ನದ ಸಾಮ್ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನ ಇದೆ. ಮುತ್ತು ರತ್ನಗಳಿವೆ. ಅಷ್ಟೇ ಯಾಕೆ ಸನ್ಯಾಸಿಗಳು ಬಳಸುವ ಕಂಚಿನ ಗಂಟೆಗಳೂ ಸಿಕ್ಕಿದೆ. ಇವುಗಳನ್ನ ಕಂಡ ಮೀನುಗಾರರು ಅರೆಕ್ಷಣ ದಿಗ್ಬ್ರಮೆಗೊಂಡಿದ್ದರು.
PublicNext
02/11/2021 09:47 pm