ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ಕತ್ತಾ: 7 ಅಡಿ ದೈತ್ಯ ಮೀನು 36 ಲಕ್ಷಕ್ಕೆ ಸೇಲ್

ಕೊಲ್ಕತ್ತಾ: ಭಾರಿ ಗಾತ್ರದ ಮೀನೊಂದು ಇಲ್ಲಿಯ ಸುಂದರಬನ್ಸ್ ನದಿಯಲ್ಲಿ ಸಿಕ್ಕಿದೆ. ಇದರ ತೂಕ 75 ಕೆ.ಜಿ ಇದೆ.ಅಷ್ಟೇ ಅಲ್ಲ 36 ಲಕ್ಷಕ್ಕೆ ಮೀನು ಮಾರುಕಟ್ಟೆಯಲ್ಲಿ ಇದು ಹರಾಜಾಗಿ ಹೊಸ ಸಂಚಲನವನ್ನೇ ಮೂಡಿಸಿದೆ.

ದೈತ್ಯ ಮೀನಿನ ಉದ್ದ ಬರೋಬ್ಬರಿ 7 ಅಡಿ ಇದೆ. ಇದರ ತೂಕ 78.4 ಕೆ.ಜಿ ಆಗಿದೆ. 5 ಜನ ಮೀನುಗಾರರ ಬೆಲೆಗೆ ಈ ಮೀನು ಬಿದ್ದಾಗ ನಿಜಕ್ಕೂ ಆಶ್ಚರ್ಯ ಪಟ್ಟಿದ್ದಾರೆ. ದೈತ್ಯ ಮೀನನ್ನು ಮಾರುಕಟ್ಟೆಗೆ ತಂದಾಗಲ್ಲಂತೂ ಎಲ್ಲಿಲ್ಲದ ಕುತೂಹಲ ಮತ್ತು ಆಶ್ಚರ್ಯ ಇಲ್ಲಿ ವ್ಯಕ್ತವಾಗಿದೆ. ಇಲ್ಲಿಯ ಕೆಎಂಪಿ ಮೀನು ವ್ಯಾಪಾರ ಕಂಪನಿ ಹರಾಜಿನಲ್ಲಿ ಈ ಮೀನನ್ನ 36,53,605 ಕ್ಕೆ ಖರೀದಿಸಿದೆ ಎಂದು ಹೇಳಲಾಗುತ್ತದೆ.

ಅದ್ಹಾಗೆ ಈ ಮೀನನ್ನ ಟೆಲಿಯಾ ಭೋಲಾ ಅಂತಲೇ ಕರೆಯುತ್ತಾರೆ.ಅದಕ್ಕೂ ಹೆಚ್ಚಾಗಿ ಈ ಮೀನಿನಲ್ಲಿ ಔಷಧಿಯ ಮೌಲ್ಯ ಅತಿ ಹೆಚ್ಚು ಇರುತ್ತಂತೆ. ಮೀನಿನ ಹೊಟ್ಟೆಯಲ್ಲಿ ಅಮೂಲ್ಯವಾದ ಸಂಪನ್ಮೂಲಗಳೂ ಇವೆಯಂತೆ. ಹಾಗಾಗಿಯೇ ಈ ದೈತ್ಯ ಮೀನು ಭಾರಿ ಬೆಲೆಗೆ ಸೇಲ್ ಆಗಿದೆ ಅನ್ನೋ ವಾರ್ತೆ ಇದೆ.

Edited By :
PublicNext

PublicNext

27/10/2021 01:27 pm

Cinque Terre

24.74 K

Cinque Terre

0

ಸಂಬಂಧಿತ ಸುದ್ದಿ