ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರದ್ದಾದ ನೋಟಿನ ಬದಲಾವಣೆಗೆ ವೃದ್ಧ ಭಿಕ್ಷುಕನ ಮನವಿ

ಚೆನ್ನೈ: ಆತನೊಬ್ಬ ಇಳಿವಯಸ್ಸಿನ ವೃದ್ಧ ಭಿಕ್ಷುಕ ಆತನಿಗೆ ನೋಟು ಬದಲಾವಣೆಯ ಅರಿವೆ ಇಲ್ಲ. ಇಷ್ಟು ದಿನ ಭಿಕ್ಷೆ ಬೇಡಿ ಕೂಡಿಟ್ಟ ಹಣ ಯಾವಾಗ ಚಲಾವಣೆಯಾಗಲಿಲ್ಲವೋ ಆಗಲೇ ಅವರ ಅರಿವಿಗೆ ಬಂದದ್ದು ನೋಟು ರದ್ದಾಗಿವೆ ಎಂದು. ಸದ್ಯ ಭಿಕ್ಷಾಟನೆಯ ಮೂಲಕ ಗಳಿಸಿದ 500 ಹಾಗೂ 1,000 ರೂಪಾಯಿ ಮುಖಬೆಲೆಯ 65,000 ರೂ. ಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿ ಕೊಡುವಂತೆ ತಮಿಳುನಾಡಿನ 65 ವರ್ಷ ವಯಸ್ಸಿನ ಅಂಧ ವ್ಯಕ್ತಿಯೊಬ್ಬರು ಸಹಾಯ ಕೋರಿ ಕೃಷ್ಣಗಿರಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.

ಚಿನ್ನಕಣ್ಣು ಎಂಬ ಈ ವ್ಯಕ್ತಿ ಕೃಷ್ಣಗಿರಿ ಜಿಲ್ಲೆಯ ಚಿನ್ನಗೌಂಡನೂರು ಗ್ರಾಮದವರು. ಚಿನ್ನಕಣ್ಣು ತನ್ನ ಐದನೇ ವಯಸ್ಸಿನಿಂದ ದೃಷ್ಟಿಹೀನರಾಗಿದ್ದು, ಭಿಕ್ಷೆ ಬೇಡುವ ಮೂಲಕ ತನ್ನ ಹಳ್ಳಿಯ ಗುಡಿಸಲಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. "ತಾನು ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಿದ್ದೇನೆ ಹಾಗೂ ತನ್ನ ವೃದ್ಧಾಪ್ಯದಲ್ಲಿ ಹಣವನ್ನು ಬಳಸುವ ಭರವಸೆಯೊಂದಿಗೆ ಅದನ್ನು ಉಳಿತಾಯ ಮಾಡಿದ್ದೇನೆ" ಎಂದು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

19/10/2021 09:45 pm

Cinque Terre

30.65 K

Cinque Terre

2

ಸಂಬಂಧಿತ ಸುದ್ದಿ