ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾತ್ರೆಯಲ್ಲಿ ಪ್ರಯಾಣಿಸಿ ಮಂಟಪ ತಲುಪಿದ ವಧು-ವರರು

ಅಲಪ್ಪುಳ :ಮದುವೆ ಮಂಟಪ ತಲುಪಲು ಇತ್ತೀಚೆಗೆ ಅನೇಕರು ವಿವಿಧ ರೀತಿಯಲ್ಲಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಾರೆ. ಆದ್ರೆ ಈ ಜೋಡಿ ಇದುವರೆಗೂ ಯಾರು ಈ ರೀತಿ ಮಂಟಪಕ್ಕೆ ಎಂಟ್ರಿ ಕೊಡದ ರೀತಿಯಲ್ಲಿ ಮಂಟಪ ತಲುಪಿದ್ದಾರೆ. ಹೌದು ದೇವರ ನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಅಲ್ಲಿನ ಜನರಿಗೆ ಅದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ನಡುವೆ ವಧು ವರರಿಬ್ಬರು ಪಾತ್ರೆಯಲ್ಲಿ ಪ್ರಯಾಣ ಬೆಳೆಸಿ ಮಂಟಪ ತಲುಪಿರುವ ಆಸಕ್ತಿದಾಯಕ ಘಟನೆ ನಡೆದಿದೆ.

ಆರೋಗ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ವಧು-ವರರು ಮದುವೆ ಮಂಟಪಕ್ಕೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದರು. ಕೊನೆಗೆ ದೊಡ್ಡ ಗಾತ್ರದ ಅಲ್ಯುಮಿನಿಯಂ ಅಡುಗೆ ಪಾತ್ರೆಯಲ್ಲಿ ಅವರಿಬ್ಬರನ್ನು ಕೂರಿಸಿಕೊಂಡು ನೀರಿನಲ್ಲಿ ತಳ್ಳಿಕೊಂಡು ಮದುವೆ ಮಂಟಪಕ್ಕೆ ಕರೆದೊಯ್ಯಲಾಯಿತು.

ಮದುವೆ ಮಂಟಪಕ್ಕೆ ನೀರಿನಲ್ಲಿ ನಡೆದುಕೊಂಡು ಹೋಗುವುದು ಅಸಾಧ್ಯವಾದ ಕಾರಣ ಮದುಮಕ್ಕಳಾಗಿ ತಯಾರಾಗಿದ್ದ ವಧು-ವರರನ್ನು ಅಡುಗೆ ಮಾಡುವ ದೊಡ್ಡ ತಪ್ಪಲೆಯಲ್ಲಿ ಕೂರಿಸಿಕೊಂಡು ಅವರ ಸಂಬಂಧಿಕರು ಪ್ರವಾಹದ ನೀರಿನಲ್ಲಿ ಕರೆದೊಯ್ದಿದ್ದಾರೆ.

ಆಕಾಶ್ ಮತ್ತು ಐಶ್ವರ್ಯ ಆರೋಗ್ಯ ಕಾರ್ಯಕರ್ತರಾಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

Edited By : Nirmala Aralikatti
PublicNext

PublicNext

18/10/2021 03:29 pm

Cinque Terre

54.85 K

Cinque Terre

0