ದೆಹಲಿ: ಸಂಗೀತಕ್ಕೆ ಅದರದ್ದೇ ಆದ ಶಕ್ತಿ ಇದೆ. ಅದರಲ್ಲೂ ಕೊಳಲು ವಾದನಕ್ಕೆ ಇರೋ ಮೋಹಕ ಸೆಳೆತ ಬಹುಶಃ ಬೇರೆ ಸಂಗೀತ ಸಾಧನಕ್ಕೆ ಇಲ್ಲ ಅನಿಸುತ್ತದೆ. ಅಷ್ಟೊಂದು ಮಾಂತ್ರಿಕ ಸೆಳೆತ ಇರೋ ಕೊಳಲು ವಾದನ ಎಂತಹ ಕಲ್ಲು ಮನಸ್ಸಿನ ವ್ಯಕ್ತಿಯನ್ನೂ ಸೆಳೆದು ಬಿಡುತ್ತದೆ.ಇದಕ್ಕೆ ಸೂಕ್ತ ಉದಾಹರಣೆ ಇಲ್ಲೊಂದಿದೆ. ಈ ಹಿರಿಯ ವ್ಯಕ್ತಿ ಅದ್ಭುತವಾಗಿಯೇ ಕೊಳಲು ನುಡಿಸುತ್ತಾರೆ. ಆದರೆ, ಅವರ ಬಳಿ ಇರೋ ಆ ಒಂದ್ ಬೋರ್ಡ್ ನೋಡಿದ್ರೆ ನಿಮ್ಗೆ ನಿಜಕ್ಕೂ ಒಂದ್ ಅರೆಕ್ಷಣ ಆ ವ್ಯಕ್ತಿ ಧರೆಗಿಳಿದ ಕೃಷ್ಣನ ಥರವೇ ಕಾಣಿಸಿ ಬಿಡ್ತಾರೆ. ಬೇಕಾದ್ರೆ ನೋಡಿ.
ಇಲ್ಲಿಯ ಕನ್ನಾಟ್ ಪ್ಲೇಸ್ ನಲ್ಲಿ ಒಬ್ಬ ಹಿರಿಯ ವ್ಯಕ್ತಿ ಕೊಳಲು ಊದುತ್ತ ಕುಳಿತುಕೊಳ್ತಾರೆ. ಇವರಿಗೆ ಭಿಕ್ಷೆ ಬೇಡುವ ಅವಶ್ಯಕತೆಯಿಲ್ಲ ಅನಿಸುತ್ತದೆ. ಹಾಗಾಗಿಯೇ ಇವರ ಬಳಿ ಬೋರ್ಡ್ ಒಂದಿದೆ. ಇದರಲ್ಲಿ “ I am not a beggar, I am just here to touch your soul with music” ಅಂತಲೇ ಬರೆಯಲಾಗಿದೆ.ಆದರೂ ಇಲ್ಲಿ ಕೆಲ ಜನ ದುಡ್ಡು ಹಾಕಿ ಹೋಗಿದ್ದಾರೆ. ಇರಲಿ ಬಿಡಿ, ಸಂಗೀತದ ಮೂಲಕ ಜನರ ಹೃದಯ ತಟ್ಟೋ ಈ ವ್ಯಕ್ತಿ, ದೆಹಲಿಯ ಈ ಸ್ಥಳದಲ್ಲಿ ವಿಶೇಷವಾಗಿಯೇ ಕಾಣಿಸುತ್ತಾರೆ. ಕೊಳಲು ನಾದದಿಂದಲೇ ಎಲ್ಲರ ಮನಸ್ಸನ್ನ ಕದ್ದು ತಮ್ಮತ್ತ ಸೆಳೆಯುತ್ತಿದ್ದಾರೆ.
PublicNext
17/10/2021 05:40 pm