ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂಗಿಗೆ ಹೆಣ್ಣು ಮಗು ಜನನ : ಪೆಟ್ರೋಲ್ ಬಂಕ್ ಮಾಲೀಕ ಅಣ್ಣನಿಂದ 3 ದಿನ ಉಚಿತ ಪೆಟ್ರೋಲ್…

ಭೋಪಾಲ್ : ಸಮಾಜ ಎಷ್ಟೇ ಮುಂದುವರೆದಿದ್ದರೂ ಇಂದಿಗೂ ಹೆಣ್ಣು ಮಗು ಹುಟ್ಟುತ್ತಿದ್ದಂತೆ ಮೂಗು ಮುರಿಯುವವರೆ ಹೆಚ್ಚು.

ಮತ್ತೊಂದೆಡೆ ತೈಲ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಇದರ ನಡುವೆ ಇಲ್ಲೊಬ್ಬ ಪೆಟ್ರೋಲ್ ಬಂಕ್ ಮಾಲೀಕ ತನ್ನ ತಂಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಖುಷಿಗೆ 3 ದಿನಗಳ ಕಾಲ ತಮ್ಮ ಬಂಕ್ ಗೆ ಬರುವವರಿಗೆ ಉಚಿತ ಪೆಟ್ರೋಲ್ ನೀಡಿದ್ದಾರೆ.

ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ದೀಪಕ್ ಸೈನಾನಿ ಉಚಿತ ಪೆಟ್ರೋಲ್ ನೀಡಿ ಸುದ್ದಿಯಲ್ಲಿದ್ದಾರೆ.

ಬೆಳಗ್ಗೆ 9 ರಿಂದ 11 ಗಂಟೆ ಮತ್ತು ಸಂಜೆ 5 ರಿಂದ 7 ಗಂಟೆಯವರೆಗೆ ಯಾರು ಪೆಟ್ರೋಲ್ ಖರೀದಿಸುತ್ತಾರೋ ಅವರಿಗೆ ಹೆಚ್ಚುವರಿ ಪೆಟ್ರೋಲ್ ಅನ್ನು ಉಚಿತವಾಗಿ ನೀಡುವುದಾಗಿ ದೀಪಕ್ ತಿಳಿಸಿದ್ದಾರೆ. 100 ರೂ. ಪೆಟ್ರೋಲ್ ಖರೀದಿಸಿದವರಿಗೆ ಶೇ. 5 ರಷ್ಟು ಹೆಚ್ಚುವರಿ ಪೆಟ್ರೋಲ್ ಮತ್ತು 200 ರಿಂದ 500 ರೂ. ಪೆಟ್ರೋಲ್ ಖರೀದಿಸಿದವರಿಗೆ 10 ರಷ್ಟು ಪೆಟ್ರೋಲ್ ಅನ್ನು ಹೆಚ್ಚುವರಿಯಾಗಿ ಉಚಿತವಾಗಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

16/10/2021 07:27 pm

Cinque Terre

45.26 K

Cinque Terre

27

ಸಂಬಂಧಿತ ಸುದ್ದಿ