ದೆಹಲಿ : ಎಲ್ಲೇ ಹೋದರು ಏನೇ ತಿಂದರು ದುಡ್ಡು ಕೊಡುವುದು ನಾವೇ ಆದ್ರೆ ಇಲ್ಲಿ ಪುಡ್ ವೊಂದನ್ನು ಫ್ರೀ ಆಗಿ ಕೊಡುವುದಲ್ಲದೆ. ಕೊಟ್ಟ ಆಹಾರವನ್ನು ಸಂಪೂರ್ಣವಾಗಿ ತಿಂದು ಮುಗಿಸಿದರೆ 20 ಸಾವಿರ ರೂ. ದುಡ್ಡು ಕೂಡಾ ದೊರೆಯುತ್ತೆ. ಹೌದು ಹತ್ತು ಕೆಜಿ ಇರುವ ಹಾಗೂ 30 ಮೊಟ್ಟೆಗಳಿಂದ ತಯಾರಿಸಿರುವ ಕಾಠಿ ರೋಲ್ ತಿಂದವರಿಗೆ 20000 ರೂ. ಬಹುಮಾನ ನೀಡಲಾಗುತ್ತದೆ.
ಹೌದು, ದೆಹಲಿಯ ಮಾಡೆಲ್ ಟೌನ್ 3ರಲ್ಲಿ ರಸ್ತೆಬದಿಯ ಫುಡ್ ಸ್ಟಾಲ್ ಸವಾಲನ್ನೊಡ್ಡಿದ್ದು, 20 ನಿಮಿಷಗಳಲ್ಲಿ ಕಾಠಿ ರೋಲ್ ಅನ್ನು ತಿಂದು ಮುಗಿಸಿದವರಿಗೆ 20,000 ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ. ಸದ್ಯ ಕಾಠಿ ರೋಲ್ ನ ವೀಡಿಯೋವನ್ನು ದಿ ಫುಡ್ ಕಲ್ಟ್ ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಈ ಬೃಹತ್ ಗಾತ್ರದ ರೋಲ್ ನೋಡಿ ನೆಟ್ಟಿಗರು ಶಾಕ್ ಆಗಿದ್ದು, ಅನೇಕ ಮಂದಿ ಈ ಚಾಲೆಂಜ್ ಸ್ವೀಕರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
PublicNext
01/10/2021 04:21 pm