ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಮೂರು ಹಲ್ಲುಗಳು ಬರುತ್ತಿಲ್ಲ ಎಂದು ಪ್ರಧಾನಿಗೆ ಪತ್ರ ಬರೆದ ಮಕ್ಕಳು : ಲೆಟರ್ ವೈರಲ್

ಡಿಸ್ಪುರ್ : ಪ್ರಧಾನಿ ಮೋದಿಗೆ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಪತ್ರ ಬರೆಯುವ ಮೂಲಕ ತಮ್ಮ ನೋವು, ನಲಿವನ್ನು ಹಂಚಿಕೊಳ್ಳುತ್ತಾರೆ. ಸದ್ಯ ಅಸ್ಸಾಂನ ಇಬ್ಬರು ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಪತ್ರ ಬರೆದಿರುವುದು ಸುದ್ದಿಯಾಗಿದೆ.

ಹೌದು ಈ ಪುಟ್ಟ ಮಕ್ಕಳು ತಮ್ಮ ಸಮಸ್ಯೆಗಳನ್ನು ಪತ್ರಗಳ ಮೂಲಕ ಇಬ್ಬರೂ ನಾಯಕರ ಮುಂದೆ ಇಟ್ಟಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಪತ್ರದಲ್ಲಿ ಬರೆದಿರುವ ಅಕ್ಷರಗಳನ್ನು ಗಮನಿಸಿದರೆ, ಇದನ್ನು ಖುದ್ದು ಮಕ್ಕಳೇ ತಮ್ಮ ಕೈಯ್ಯಾರೆ ಬರೆದಿದ್ದಾರೆ ಎಂಬುವುದರಲ್ಲಿ ಅನುಮಾನವಿಲ್ಲ. ಸದ್ಯ ಈ ಲೆಟರ್ ನೆಟ್ಟಿಗರ ಮನ ಗೆದ್ದಿದೆ.

ಈ ಮಕ್ಕಳ ಹೆಸರು ರಾವ್ಜಾ ಮತ್ತು ಆರ್ಯನ್. ರವ್ಜಾಗೆ ಆರು ವರ್ಷ, ಆರ್ಯನಿಗೆ ಐದು ವರ್ಷ. ಇಬ್ಬರೂ ಎರಡು ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ. ಆರ್ಯನ್ ಪಿಎಂ ಮೋದಿಗೆ ಬರೆದಿರುವ ಪತ್ರದಲ್ಲಿ, 'ಪ್ರಿಯ ಮೋದಿ ಜೀ .. ನನ್ನ ಮೂರು ಹಲ್ಲುಗಳು ಬರುತ್ತಿಲ್ಲ, ದಯವಿಟ್ಟು ಸೂಕ್ತ ಕ್ರಮಗಳನ್ನು ಸೂಚಿಸಿ. ಈ ಸಮಸ್ಯೆಯಿಂದ ನನ್ನ ನೆಚ್ಚಿನ ಆಹಾರವನ್ನು ಅಗಿಯಲು ನನಗೆ ಕಷ್ಟವಾಗುತ್ತಿದೆ.' ಎಂದಿದ್ದಾರೆ.

ಮತ್ತೊಂದೆಡೆ, ಅಸ್ಸಾಂನ ಮುಖ್ಯಮಂತ್ರಿಯನ್ನುದ್ದೇಶಿಸಿ ರವ್ಜಾ ಬರೆದ ಪತ್ರದಲ್ಲಿ, 'ಪ್ರೀತಿಯ ಹಿಮಂತ ಮಾಮಾ, ನನ್ನ ಹಲ್ಲುಗಳು ಬರುತ್ತಿಲ್ಲ. ನಾನು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇನೆ ಮತ್ತು ಆಹಾರವನ್ನು ಅಗಿಯುವಲ್ಲಿ ನಾನು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿರುವುದರಿಂದ ದಯವಿಟ್ಟು ಅಗತ್ಯ ಕ್ರಮ ಕೈಗೊಳ್ಳಿ' ಎಂದಿದ್ದಾರೆ. ಇದರೊಂದಿಗೆ, ಇನ್ನರೂ ಮಕ್ಕಳು ಪತ್ರದಲ್ಲಿ ಸಣ್ಣ ರೇಖಾಚಿತ್ರಗಳನ್ನು ಸಹ ಮಾಡಿದ್ದಾರೆ. ಸದ್ಯ ಮಕ್ಕಳ ಪತ್ರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Edited By : Nirmala Aralikatti
PublicNext

PublicNext

29/09/2021 02:44 pm

Cinque Terre

45.55 K

Cinque Terre

6