ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ದಾರದಿಂದ ರಾಮಾಚಾರಿಯ ಕಲಾಕೃತಿ ರಚಿಸಿದ ಇಂಜಿನೀಯರ್ ಪದವೀಧರೆ.

ಚಿತ್ರದುರ್ಗ : ಕಲೆ ಎಂಬುದು ಯಾರಪ್ಪನ ಸ್ವತ್ತಲ್ಲ. ಯಾರು ಎಷ್ಟು ಬೇಕಾದರೂ ಕಲಿಯಬಹುದು ಜೊತೆಗೆ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಬ್ಬೊಬ್ಬರ ಕೈಯಲ್ಲಿ ಒಂದೊಂದು ರೀತಿಯಲ್ಲಿ ಕಲೆ ಎಂಬುದು ಅರಳಿ ನಿಂತಿರುತ್ತದೆ. ಅಂಥದೊಂದು ಕಲೆ ಚಿತ್ರದುರ್ಗದಲ್ಲಿ ಅರಳಿ ನಿಂತಿದೆ. ಅಂದಹಾಗೆ ಚಿತ್ರದುರ್ಗದ ಕೋಟೆಯಲ್ಲಿ ಚಿತ್ರೀಕರಿಸಿದ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಂತಹ ಮಹಾನ್ ವ್ಯಕ್ತಿಯ ಕಲಾಕೃತಿಯನ್ನು ಇದೇ ಚಿತ್ರದುರ್ಗ ನಗರದ ಇಂಜಿನಿಯರಿಂಗ್ ಪದವೀಧರೆಯೊಬ್ಬಳು ದಾರದ ಮೂಲಕ ಡಾ. ದಿವಂಗತ ವಿಷ್ಣುವರ್ಧನ್ ಅವರ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾಳೆ.

ನಗರದ ಪದವೀಧರೆ ಐಶ್ವರ್ಯಾ ಅವರು ಯಜಮಾನನ ಜನ್ಮದಿನಾಚರಣೆಗೆ ದಾರದಿಂದ ಪ್ರತಿಕೃತಿ ರಚಿಸಿ ವಿಶೇಷ ಉಡುಗೊರೆ ನೀಡಿದ್ದಾಳೆ. ಐಶ್ವರ್ಯ ಅವರು ಬರೋಬ್ಬರಿ 5 ಕಿಲೋ ಮೀಟರ್ ನಷ್ಟು ಉದ್ದದ ದಾರ ಬಳಸಿಕೊಂಡು ಈ ಸಹಾಸ ಮಾಡಿದ್ದಾಳೆ. ಪದವೀಧರೆ ಐಶ್ವರ್ಯಾ ಸುಮಾರು ೫ ಕಿ.ಮೀ.ನಷ್ಟು ಉದ್ದದ ದಾರ ಬಳಸಿಕೊಂಡು ಮರದ ಬೋರ್ಡ್‌ನಲ್ಲಿ ಮೊಳೆಗಳ ಸಹಾಯದಿಂದ ಸರಿಸುಮಾರು 15 ಗಂಟೆ ಸಮಯ ತೆಗೆದುಕೊಂಡು ಈ ಸುಂದರವಾದ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾಳೆ.

ಒಂದು ಬಿಳಿ ಬಣ್ಣದ ಹಲಗೆಯ ಮೇಲೆ ವೃತ್ತಾಕಾರದಲ್ಲಿ ಸಣ್ಣ ಸಣ್ಣ ಮೊಳೆಗಳನ್ನು ಹೊಡೆದು, ಅದರ ಮೂಲಕ ಒಂದು ಬದಿಯಿಂದ ಮತ್ತೊಂದು ಬದಿಗೆ ಕಪ್ಪುದಾರ ಎಳೆಯುವ ಮೂಲಕ ದಾರದಲ್ಲೇ ವಿಷ್ಣುವರ್ಧನ್ ಮುಖದ ಚಿತ್ರ ಬಿಡಿಸಿ ಗಮನ ಸೆಳೆದರು. ಈ ದಾದಾನ ಕಲಾಕೃತಿಯನ್ನು ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರಿಗೆ ತಲುಪಿಸಿ ಆಸೆ ಈಡೇರಿಸಿಕೊಂಡಿದ್ದಾಳೆ. ಪದವೀಧರೆ ಐಶ್ವರ್ಯಾ ದಾರದ ಮೂಲಕ ವಿಷ್ಣುದಾದ ಭಾವಚಿತ್ರ ಮೂಡಿಸಿರುವ ಈ ವಿಶಿಷ್ಟ ಕಲೆಗೆ ಸ್ಟ್ರಿಂಗ್ ಆರ್ಟ್ ಎಂದು ಕರೆಯುತ್ತಾರೆ. ಈಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

ಓದಿದ್ದು ಇಂಜಿನಿಯರಿಂಗ್ ಆದರೂ, ಕಲೆಗಳಲ್ಲಿ ಮೊದಲಿಂದಲೂ ಆಸಕ್ತಿ ಇತ್ತು. ಏನೇ ಹೊಸತು ಕಂಡರೂ ಕಲಿಯುವ ಹವ್ಯಾಸ. ಯಾವುದೇ ಕಲೆಯನ್ನು ಮೊದಲು ರಚನೆ ಮಾಡುವುದು ನನ್ನ ಇಷ್ಟದ ಹೀರೋ ವಿಷ್ಣುವರ್ಧನ್ ಅವರ ಮೇಲೆ. ದಾರದ ಆರ್ಟ್ ಕೂಡಾ ಅವರಿಗಾಗಿ, ನನ್ನ ಕಲೆಯನ್ನು ಬೆಂಬಲಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು ಎನ್ನುತ್ತಾರೆ ಕಲಾವಿದೆ ಜಿ.ಜಿ. ಐಶ್ವರ್ಯಾ.

Edited By : Shivu K
PublicNext

PublicNext

26/09/2021 01:00 pm

Cinque Terre

106.18 K

Cinque Terre

10

ಸಂಬಂಧಿತ ಸುದ್ದಿ