ಬಾಗಲಕೋಟೆ: ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರತ ಬಾಗಲಕೋಟೆ ಮೂಲಕ ಯೋಧನೋರ್ವ ಹಾವು ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಚಿದಾನಂದ ಚನ್ನಬಸಪ್ಪ ಹಲಕುರ್ಕಿ (ಶಿರಸ್ಥಾರ) (25) ಮೃತಪಟ್ಟ ಯೋಧ. ಇಂಡಿಯನ್ ಆರ್ಮಿ (ಮರಾಠಾ ರೆಜಿಮೆಂಟ ಸೈನಿಕ) ನಾಗಿ ಕಳೆದ 6 ವರ್ಷ 9 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ಹಾವು ಕಚ್ಚಿ ಮೃತಪಟ್ಟಿದ್ದಾರೆ.
ಮೃತ ಯೋಧ ಚಿದಾನಂದ ಅವರಿಗೆ ಒರ್ವ ಸಹೋದರ, ತಾಯಿ ರತ್ನಮ್ಮ ಸೇರಿದಂತೆ ಅಪಾರ ಬಂಧು ಬಳಗವಿದೆ.
ಸದ್ಯ ಯೋಧನ ಕುಟುಂಬದಲ್ಲಿ ಶೋಕ ಮಡುಕಟ್ಟಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಯೋಧನ ಪಾರ್ಥಿವ ಶರೀರ ಶುಕ್ರವಾರ ಅಥವಾ ಶನಿವಾರ ಸ್ವಗ್ರಾಮಕ್ಕೆ ಬರುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.
PublicNext
09/09/2021 05:55 pm