ಹೈದರಾಬಾದ್: ತನ್ನದೇ ಮದುವೆ ಸಮಾರಂಭದಲ್ಲಿ 'ನೀ ಬುಲೆಟ್ಟು ಬಂಡಿ' ಎಂಬ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದ ಆ ಬೆಡಗಿಗೆ ಈಗ ಅದೃಷ್ಟ ಖುಲಾಯಿಸಿದೆ.
ವಿಷಯ ಏನಪ್ಪಾ ಅಂದ್ರೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಜನ್ನಾರ್ ಮೂಲದ ಈ ಯುವತಿ ಶ್ರೀಯಾ ಅವರು ಇದೇ ಆಗಸ್ಟ್ ತಿಂಗಳ 14ರಂದು ರಾಮಕೃಷ್ಣಪುರದ ಅಕುಲಾ ಅಶೋಕ್ ಎಂಬುವವರನ್ನು ವರಿಸಿದ್ದರು. ತಮ್ಮ ಮದುವೆ ಸಂಭ್ರಮದಲ್ಲಿ ನೀ ಬುಲೆಟ್ಟು ಬಂಡಿ ಎಂಬ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಗಾಯಕ ಮೋಹನ್ ಭೋಗರಾಜು ಅವರ ಹಾಡುಗಳನ್ನು ನಿರ್ಮಿಸುವ ಬ್ಲ್ಯೂ ರಾಬಿಟ್ ಎಂಬ ಮನರಂಜನಾ ಕಂಪನಿ ಇದನ್ನು ಗಮನಿಸಿದೆ. ತಮ್ಮ ಮುಂದಿನ ಹಾಡಿಗೆ ಹೆಜ್ಜೆ ಹಾಕಲು ಶ್ರೀಯಾ ಅವರಿಗೆ ಅವಕಾಶ ಕೊಟ್ಟಿದೆ.
PublicNext
27/08/2021 12:30 pm