ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕ್ಸಲ್ ದಾಳಿ : ಐಟಿಬಿಪಿ ಸಿಬ್ಬಂದಿ ಹುತಾತ್ಮ

ನಾರಾಯಣಪುರ: ಛತ್ತೀಸಗಡದ ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ನಕ್ಸಲರು ನಡೆಸಿದ ದಾಳಿಯಲ್ಲಿ ಐಟಿಬಿಪಿಯ (ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್) ಸಹಾಯಕ ಕಮಾಂಡೆಂಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಛೋಟೆಡೊಂಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಐಟಿಬಿಪಿಯ 45ನೇ ಬೆಟಾಲಿಯನ್ ನ ಕಡಮೆಟ ಕ್ಯಾಂಪ್ ಬಳಿ ಮಧ್ಯಾಹ್ನ ದಾಳಿ ನಡೆದಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್(ಬಸ್ತಾರ್ ಶ್ರೇಣಿ) ಸುಂದರರಾಜ್ ಪಿ.ಅವರು ಹೇಳಿದ್ದಾರೆ.

ಐಟಿಬಿಪಿಯ 45 ನೇ ಬೆಟಾಲಿಯನ್ ನ ಸಹಾಯಕ ಕಮಾಂಡೆಂಟ್ ಸುಧಾಕರ್ ಶಿಂಧೆ ಮತ್ತು ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್ ಐ) ಗುರುಮುಖ್ ಸಿಂಗ್ ಅವರು ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಐಜಿ ತಿಳಿಸಿದ್ದಾರೆ. ದಾಳಿಯ ನಂತರ, ನಕ್ಸಲರು ಒಂದು ಎಕೆ -47 ರೈಫಲ್, ಎರಡು ಬುಲೆಟ್ ಪ್ರೂಫ್ ಜಾಕೆಟ್ ಗಳು ಮತ್ತು ಭದ್ರತಾ ಸಿಬ್ಬಂದಿಯ ಒಂದು ವೈರ್ ಲೆಸ್ ಸೆಟ್ ಲೂಟಿ ಮಾಡಿ ಪರಾರಿಯಾಗಿದ್ದಾರೆ.

Edited By : Nirmala Aralikatti
PublicNext

PublicNext

20/08/2021 09:10 pm

Cinque Terre

146.91 K

Cinque Terre

4

ಸಂಬಂಧಿತ ಸುದ್ದಿ