ಕೊಡಗು: 2021 ರ ಮೇ 16 ರಂದು ಕೋವಿಡ್ ಆಸ್ಪತ್ರೆಯಲ್ಲಿ ಕುಶಾಲನಗರದ ಪ್ರಭಾ ಎಂಬುವರು ಮೃತಪಟ್ಟಿದ್ದರು. ಈ ವೇಳೆ ಅವರ ಆಸ್ಪತ್ರೆಯಲ್ಲಿ ಮೊಬೈಲ್ ಕಾಣೆಯಾಗಿತ್ತು. ಮೊಬೈಲ್ ಹುಡುಕಿ ಕೊಡುವಂತೆ ಪ್ರಭಾ ಅವರ ಮಗಳು ಹೃತೀಕ್ಷಾ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದಳು.
ಅಮ್ಮನ ಫೋಟೋ ಮತ್ತು ನೆನಪುಗಳು ಮೊಬೈಲ್ ನಲ್ಲಿದೆ. ದಯವಿಟ್ಟು ನನಗೆ ಮರಳಿಸಿ ಅಂತ ಮನವಿ ಮಾಡಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೊಡಗು ಪೊಲೀಸರು ಅಂದಿನಿಂದ ಮೊಬೈಲ್ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಮೂರು ತಿಂಗಳ ಬಳಿಕ ಆಸ್ಪತ್ರೆಯ ಗೋಡೌನ್ ನಲ್ಲಿ ಮೊಬೈಲ್ ಪತ್ತೆಯಾಗಿದೆ.
ಮೊಬೈಲ್ ಹೊರಗಿನ ಕವರ್ ಬದಲಾಗಿದೆ. ಉಳಿದೆಲ್ಲಾ ಡೇಟಾ ಅದರಲ್ಲಿದೆ. ಮೊಬೈಲ್ ಮರಳಿ ಸಿಕ್ಕಿದಕ್ಕೆ ಹೃತೀಕ್ಷಾ ಖುಷಿ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಪತ್ತೆ ಮಾಡುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
PublicNext
19/08/2021 05:40 pm