ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ದೆಹಲಿ ಹೋರಾಟದ ರೈತರಿಗೆ ಚಿತ್ರದುರ್ಗದ ಹೋಳಿಗೆ ಊಟ

ಚಿತ್ರದುರ್ಗ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳುವಳಿಯಲ್ಲಿ ಚಿತ್ರದುರ್ಗದ ರೈತರು ಹೋರಾಟದಲ್ಲಿ ಭಾಗವಹಿಸಿ, ಬೆಂಬಲ ಸೂಚಿಸಿದ್ದಾರೆ. ನಂತರ ಚಳುವಳಿ ಹೋರಾಟಗಾರರ ರೈತರಿಗೆ ಕರ್ನಾಟಕದ ಜನಪ್ರಿಯ ಅಡುಗೆಯಾದ ಹೋಳಿಗೆ ಸೀಕರಣೆ, ಕಡಲೆ ಬೇಳೆ ಕೋಸಂಬರಿ ಮತ್ತು ಹೋಳಿಗೆ ಸಾಂಬಾರ್ ಉಣ ಬಡಿಸಿ ಖುಷಿಪಟ್ಟಿದ್ದಾರೆ.

ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಿಂದ ಕೆಲವು ರೈತರು ಇದೇ ತಿಂಗಳ 12 ರಂದು ದಾವಣಗೆರೆ ಮೂಲಕ 14 ರಂದು ದೆಹಲಿ ತಲುಪಿ, " ಗಾಜಿಪುರ ಗಡಿಭಾಗದಲ್ಲಿ" ನಡೆಯುತ್ತಿರುವ ಚಳುವಳಿಯಲ್ಲಿ ಪಾಲ್ಗೊಂಡಿದ್ದರು.

ಇನ್ನು ಚಳುವಳಿಗಾರರಿಗೆ ಸೇವೆ ಮಾಡಬೇಕೆಂಬ ಆಲೋಚನೆಯಿಂದ ಕರ್ನಾಟಕದ ಸ್ವಾದಿಷ್ಟ ಭೋಜನವಾದ ಹೋಳಿಗೆ, ಸೀಕರಣೆಯೂಟ ಉಣಬಡಿಸಿದರು.

ರೈತ ನಾಯಕ ರಾಕೇಶ್ ಟಿಕಾಯತ್ ಒಳಗೊಂಡಂತೆ ಅನೇಕ ರೈತ ಮುಖಂಡರು ಊಟ ಸವಿದು ಮೆಚ್ಚುಗೆ ವ್ಯಕ್ತಪಡಿಸಿರುವುದು ನಮಗೆಲ್ಲಾ ಖುಷಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ ತಿಳಿಸಿದರು.

Edited By : Manjunath H D
PublicNext

PublicNext

19/08/2021 05:03 pm

Cinque Terre

53.94 K

Cinque Terre

5