ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

16 ಕೋಟಿ ರೂ. ಬೆಲೆ ಇಂಜೆಕ್ಷನ್ ಫ್ರೀ ನೀಡಿದ ಅಮೆರಿಕ ಕಂಪನಿ

ನಾಸಿಕ್ : ‘ಬೆನ್ನುಮೂಳೆಯ ಸ್ನಾಯು ಕ್ಷೀಣತೆ’ ಒಂದು ಆನುವಂಶಿಕ ಕಾಯಿಲೆ. 10,000ದಲ್ಲಿ ಒಂದು ಮಗುವಿಗೆ ಈ ಕಾಯಿಲೆ ಬರಬಹುದು. ಮಗುವಿನ ಚಲನೆ ನಿಧಾನವಾಗುತ್ತದೆ ಮತ್ತು ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಇದರಿಂದ ಮಗು ಸಾಯಬಹುದು.

ಇಂತಹ ಕಾಯಿಲೆಯಿಂದ ಬಳಲುತ್ತಿದ್ದ ಎರಡು ವರ್ಷದ ಮಗುವಿಗೆ ಬೇಕಾಗಿದ್ದ 16 ಕೋಟಿ ರೂ. ಮೌಲ್ಯದ ಇಂಜೆಕ್ಷನ್ ವೊಂದನ್ನು ಅಮೆರಿಕ ಮೂಲಕ ಕಂಪನಿಯೊಂದು ಉಚಿತವಾಗಿ ನೀಡಿದೆ. ಕಂದನ ಪ್ರಾಣ ಉಳಿಸಲು ಸಹಕರಿಸಿದೆ.

ಮಹಾರಾಷ್ಟ್ರದ ನಾಸಿಕ್ನ ಮಗು ಶಿವರಾಜ್ ದವಾರೆಯ ಮಾರಕ ಕಾಯಿಲೆಯಿಂದ ಬಳಲುತ್ತಿತ್ತು. ಈ ಕಂದನ ಜೀವ ಉಳಿಸುವ 16 ಕೋಟಿ ರೂ ಮೌಲ್ಯದ ಇಂಜೆಕ್ಷನ್ ಅನ್ನು ಅಮೆರಿಕದ ಸಂಸ್ಥೆಯೊಂದು ಉಚಿತವಾಗಿ ನೀಡುತ್ತಿದೆ. ಲಕ್ಕಿ ಡ್ರಾದಲ್ಲಿ ಈ ಕೊಡುಗೆ ಲಭ್ಯವಾಗಿದ್ದು, ಈ ರೀತಿ ಉಚಿತ ಇಂಜೆಕ್ಷನ್ ಪಡೆಯುತ್ತಿರುವ ಭಾರತದ ಮೊದಲ ರೋಗಿ ಎನಿಸಿಕೊಂಡಿದ್ದಾನೆ.

2019 ಆಗಸ್ಟ್ 8 ರಂದು ಜನಿಸಿರುವ ಶಿವರಾಜ್, ಬಹು ಅಪರೂಪದ ಕಾಯಿಲೆ ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ (ಎಸ್ಎಂಎ) ಎಂಬ ಕಾಯಿಲೆಯಿಂದ ಬಳಲುತ್ತಿದ್ದ. ಈತನ ತಂದೆ ವಿಶಾಲ್ ದವಾರೆ ಮತ್ತು ತಾಯಿ ಕಿರಣ ಅವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು.

Edited By : Nirmala Aralikatti
PublicNext

PublicNext

03/08/2021 04:03 pm

Cinque Terre

52.22 K

Cinque Terre

13

ಸಂಬಂಧಿತ ಸುದ್ದಿ