ರಕ್ತ ಸಂಬಂಧಿಯಲ್ಲದಿದ್ದರೂ ಜಾತಿ, ಧರ್ಮದ ಭೇದವಿಲ್ಲದ ಬಲವಾದ ಸಂಬಂಧ ಮತ್ತು ಪ್ರೀತಿಯ ಪ್ರಾಮುಖ್ಯವನ್ನು ಸಾರುವ ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು ಭಾರತದಲ್ಲಿ ಪ್ರತೀ ವರ್ಷ ಆಗಸ್ಟ್ ತಿಂಗಳ ಮೊದಲ ರವಿವಾರ ಆಚರಿಸಲಾಗುತ್ತಿದೆ.
ಈ ಗೆಳೆತನ ಎಂಬುವುದೇ ಒಂದು ಅದ್ಭುತ ಭಾವ-ಬಾಂಧವ್ಯ. ಇದು ಎಲ್ಲಿಂದ ಬೇಕಾದರೂ ಶುರುವಾಗಬಹುದು, ಯಾರ ಜತೆಗಾದರೂ ಉಂಟಾಗಬಹುದು. ವಯಸ್ಸು, ಜಾತಿ, ಮತ, ಅಧಿಕಾರ, ಅಂತಸ್ತು, ಧರ್ಮ ಇದ್ಯಾವುದರ ಹಂಗೂ ಇಲ್ಲದೆ ಮನುಷ್ಯನನ್ನು ಬೆಸೆಯುವ ಒಂದು ಬೆಸುಗೆ ಸ್ನೇಹ.
ಪಬ್ಲಿಕ್ ನೆಕ್ಸ್ಟ್ ಜೊತೆ ನಿಮ್ಮ ಈ ವರ್ಷದ ಫ್ರೆಂಡ್ ಶಿಪ್ ಡೇ ದಿನ ತುಸು ಹೆಚ್ಚು ಸ್ಪೆಷಲ್ ಆಗಿದೆ ಎಂದು ಭಾವಿಸುತ್ತೇವೆ. ನಾವು ಹೇಳುತ್ತಿದ್ದಂತೆ ನಿಮ್ಮ ಫ್ರೆಂಡ್ಸ್ ಜೊತೆಗಿನ ಫೋಟೊ ಹಂಚಿಕೊಂಡ ನಿಮಗೆಲ್ಲ ಧನ್ಯವಾದಗಳು..
PublicNext
01/08/2021 04:18 pm