ಮೈಸೂರು: ಸಂದರ್ಭ ಬಂದ್ರೆ ನಮ್ಮ ಹೆಣ್ಣ್ ಹೈಕ್ಳು ಎಲ್ಲದಕ್ಕೂ ಸಿದ್ದ ಎನ್ನುವುದನ್ನಾ ಮೈಸೂರು ಡಿಸಿ ಸಾಬೀತು ಮಾಡಿದ್ದಾರೆ. ಹೌದು ಹೆಣ್ಮಕ್ಳೆ ಸ್ಟ್ರಾಂಗು ಗುರು ಎನ್ನುವಂತೆ ಜಿಲ್ಲೆಯ ಡಿಸಿ ರೋಹಿಣಿ ಸಿಂಧೂರಿ ಅವರು ಕಾರ್ಗೆ ಪಂಚರ್ ಹಾಕುತ್ತಿರುವ ವೀಡಿಯೋ ಈಗ ಸಖತ್ ವೈರಲ್ ಆಗಿದೆ.
ಕುಟುಂಬದ ಜೊತೆ ರೋಹಿಣಿ ಸಿಂಧೂರಿ ಅವರು ಹೊರ ಹೋದ ವೇಳೆ ಕಾರಿನ ಟೈರ್ ಪಂಕ್ಚರ್ ಆಗಿದೆ. ಆಗ ಸ್ವತಃ ರೋಹಿಣಿಯವರೆ ಕಾರಿನ ಪಂಚರ್ ತಿದ್ದುತ್ತಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರಿನ ಟೈರ್ ಕಳಚುವ ವೇಳೆ ಸಾರ್ವಜನಿಕರು ಈ ವೀಡಿಯೋ ಮಾಡಿದ್ದಾರೆ. ತಾವು ರೋಹಿಣಿ ಸಿಂಧೂರಿ ಅಲ್ಲವಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ನಸು ನಕ್ಕು ಸುಮ್ಮನಾದ ಡಿಸಿ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ.
PublicNext
26/02/2021 12:10 pm