ಭುವನೇಶ್ವರ: ಎಲ್ಲರಿಗೂ ಮನುಷ್ಯ ಜನ್ಮ ಒಂದೇ ಮಾನವನಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ಎಲ್ಲಾ ಆಸೆ ಆಕಾಂಕ್ಷೆಗಳು ಇರುತ್ತವೆ. ಆದರೆ ಅಂಗವಿಕಲರು ತಮ್ಮ ಬದುಕಿನ ಆಸಕ್ತಿ ಕಳೆದುಕೊಳ್ಳದಿರಲು ಒಡಿಸಾ ಸರ್ಕಾರ ಯೋಜನೆವೊಂದನ್ನಾ ಜಾರಿ ಮಾಡಿದೆ
ಹೌದು ಅಂಗವಿಕಲರು ಮದುವೆಯಿಂದ ಹಿಂದುಳಿಯುವುದನ್ನು ಸರಿಪಡಿಸಬೇಕೆನ್ನುವ ಹಿನ್ನೆಲೆಯಲ್ಲಿ ಅಂಗವಿಕಲರನ್ನು ಮದುವೆಯಾಗುವವರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಇದೀಗ ಪ್ರೋತ್ಸಾಹ ಧನದ ಮೊತ್ತವನ್ನು 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ.
ಈ ಕುರಿತಾಗಿ ಸಾಮಾಜಿಕ ಭದ್ರತೆ ಮತ್ತು ವಿಕಲಚೇತನರ ಸಬಲೀಕರಣ (ಎಸ್ಎಸ್ಇಪಿಡಿ) ವಿಭಾಗದ ಆಯುಕ್ತ-ಕಮ್-ಕಾರ್ಯದರ್ಶಿ ಭಾಸ್ಕರ್ ಶರ್ಮಾ ಪ್ರಕಟಣೆ ಹೊರಡಿಸಿದ್ದಾರೆ.
ಈವರೆಗೆ ಅಂಗವಿಕಲರನ್ನು ಮದುವೆಯಾಗುವವರಿಗೆ 50 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಇನ್ನು ಮುಂದೆ ಅದನ್ನು 2.5 ಲಕ್ಷ ರೂಪಾಯಿಗೆ ಏರಿಸಲಾಗುವುದು. ಮಾನದಂಡಗಳಲ್ಲಿ ಒಳಪಟ್ಟಿರುವ ಅಂಗವೈಕಲ್ಯ ಹೊಂದಿದ ವ್ಯಕ್ತಿಯನ್ನು ಯಾವುದೇ ರೀತಿ ವರದಕ್ಷಿಣೆ ಅಥವಾ ವಧು ದಕ್ಷಿಣೆ ತೆಗೆದುಕೊಳ್ಳದೆ ಮದುವೆಯಾದರೆ ಈ ಪ್ರೋತ್ಸಾಹ ಧನ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
PublicNext
25/02/2021 07:36 am