ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯದಲ್ಲಿ ಶೈಕ್ಷಣಿಕ ಕಲಿಕೆಗಾಗಿ ಆರ್ಥಿಕ ಸಹಾಯ ಕೇಳಿದ ಬಾಲಕನಿಗೆ ಜಿಲ್ಲಾಧಿಕಾರಿಯಿಂದ ವೈಯಕ್ತಿಕ ಸಹಾಯದ ಶ್ರೀರಕ್ಷೆ.

ಬೈಲಹೊಂಗಲ: ನನಗೆ ತಂದೆ ಇಲ್ಲ, ಅಮ್ಮ ಸಂಪೂರ್ಣ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿದ್ದಾರೆ, ಅಕ್ಕ ನಾಲ್ಕನೇ ತರಗತಿಯ ಮೊರಾರ್ಜಿ ಶಾಲೆಯಲ್ಲಿ ಕಲಿತಿದ್ದು ನಾನು ಕಾನ್ವೆಂಟ್ ಶಾಲೆಯಲ್ಲಿ ಕಲಿತಾ ಇದೀನಿ. ಆದರೆ ಶೈಕ್ಷಣಿಕ ವೆಚ್ಚ ಭರಿಸಲಾಗದೆ ನನ್ನ ಕುಟುಂಬ ಪರದಾಡುತ್ತಿದೆ. ಹೀಗಾಗಿ ನಾನು ಶಾಲೆ ಬಿಡುವ ಪರಿಸ್ಥಿತಿ ಬಂದಿದೆ ಎಂದು ಜಿಲ್ಲಾಧಿಕಾರಿ ಎದರುಗಡೆ ಇಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ದಲ್ಲಿ ಮನವಿ ಮಾಡಿದ್ದ ಬಸವರಾಜ್ ಕೋಣಿಣ್ಣವರ್ ಬಾಲಕನಿಗೆ ಬೆಳಗಾವಿ ಜಿಲ್ಲಾಧಿಕಾರಿ ಎಮ್. ಜಿ. ಹಿರೇಮಠ, ಸರಕಾರದಿಂದ ಎನ ಸಹಾಯ ಮಾಡಬಹುದು ಮಾಡ್ತಿನಿ. ಇಲ್ಲವಾದಲ್ಲಿ ನಾನೇ ವೈಯಕ್ತಿಕವಾಗಿ ಆ ಬಾಲಕ ಶೈಕ್ಷಣಿಕ ವೆಚ್ಚ ಬರಿಸುವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಇದರ ಜೊತೆಗೆ ತಾಯಿ ಮತ್ತು ಮಗ ಬಾಡಿಗೆ ಮನೆ ಇರುವುದರಿಂದ ಆಶ್ರಯ ಮನೆಗಾಗಿ ಕೂಡಾ ಮನವಿ ಮಾಡಿಕೊಂಡಿದ್ದ ಈ ಬಾಲಕ. ಮನವಿ ಸ್ಪಂದಿಸಿದ ಜಿಲ್ಲಾಧಿಕಾರಿ ಬಾಲಕನಿಗೆ ಶೈಕ್ಷಣಿಕ ವೆಚ್ಚದ ಜೊತೆಗೆ ಆಶ್ರಯ ಮನೆಯೊ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳತ್ತೇನೆ ಎಂದು ತಿಳಿಸಿದರು.

ಶನಿವಾರ ಇಂದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಯೋಜನೆ ಅಡಿಯಲ್ಲಿ ಜಿಲ್ಲಾಧಿಕಾರಿ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ಇಂದು ಗ್ರಾಮ ವಾಸ್ತವ್ಯ ಮಾಡಿ ಗ್ರಾಮಸ್ಥರ ಮನವಿಗಳನ್ನ ಮತ್ತು ಸಮಸ್ಯೆಯನ್ನು ಬಗ್ಗೆ ಆಲಿಸಿ ಗ್ರಾಮಸ್ಥರಿಗೆ ಅವರ ಸಮಸ್ಯೆಗಳಿಗೆ ಆದಷ್ಟು ಶಿಘ್ರ ಗತಿಯಲ್ಲಿ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು.

Edited By : Manjunath H D
PublicNext

PublicNext

20/02/2021 08:58 pm

Cinque Terre

65.16 K

Cinque Terre

4