ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆ ನಿರ್ಮಾಣದ ಕನಸಿಗೆ ಮಣ್ಣು ಹಾಕಿದ ಗೆದ್ದಲು ಹುಳು!

ಹೈದರಾಬಾದ್: ''ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು'' ಅನ್ನೋ ಮಾತಿದೆ. ಮನೆ ಕಟ್ಟಿ, ಮದುವೆ ಮಾಡುವಷ್ಟರಲ್ಲಿ ಜೀವನದ ಅರ್ಧ ಆಯಸ್ಸೇ ಕಳೆದು ಹೋಗಿರುತ್ತೆ. ಇಂತಹ ಕಷ್ಟವನ್ನು ಎದುರಿಸಿ ಮನೆ ಕಟ್ಟಲು ಮುಂದಾಗಿದ್ದ ಉದ್ಯಮಿಯೊಬ್ಬರ ಕನಸು ನುಚ್ಚುನೂರಾಗಿದೆ.

ಹೌದು. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಮೈಲಾವರಂ ನಿವಾಸಿ, ಉದ್ಯಮಿ ಬಿಜ್ಲಿ ಜಾಮಲಯ್ಯ ಅವರ ಕಥೆ ಇದು. ಜಾಮಲಯ್ಯ ಅವರು ತಮ್ಮ ಜೀವಮಾನವಿಡಿ ಶ್ರಮಪಟ್ಟು ದುಡಿದ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡದೇ ಪೆಟ್ಟಿಗೆಯೊಂದರಲ್ಲಿ ಕೂಡಿ ಇಟ್ಟಿದ್ದರು. ಇತ್ತೀಚೆಗೆ ಸಂಗ್ರಹಿಸಿಟ್ಟ ಹಣವನ್ನು ತೆರೆದು ನೋಡಿದ ಉದ್ಯಮಿಗೆ ಆಘಾತವಾಗಿತ್ತು. ಪೆಟ್ಟಿಗೆ ಸುರಕ್ಷಿತವಾಗಿಲ್ಲದ ಪರಿಣಾಮ 500 ರೂ. ಹಾಗೂ 200 ರೂ. ಮುಖಬೆಲೆಯ ನೋಟಿನ ಕಂತೆಗಳನ್ನು ಗೆದ್ದಲು ಹುಳ ತಿಂದು ಚೂರು ಚೂರು ಮಾಡಿವೆ.

ಹಂದಿ ಮಾರಾಟ ವ್ಯಾಪಾರ ಮಾಡುತ್ತಿರುವ ಜಾಮಲಯ್ಯ ಅವರು ವಹಿವಾಟಿನ ಹಣವನ್ನು ಬ್ಯಾಂಕ್‌ನಲ್ಲಿ ಇಡದೆ ಟ್ರಂಕ್‌ನಲ್ಲಿ ಕೂಡಿ ಇಡುತ್ತಿದ್ದರು. ತಾನು ಮನೆ ಕಟ್ಟಬೇಕು ಎಂಬ ಕನಸಿನೊಂದಿಗೆ ಸುಮಾರು ೫ ಲಕ್ಷ ರೂಪಾಯಿ ಟ್ರಂಕ್‌ನಲ್ಲಿ ಇಟ್ಟಿರುವುದಾಗಿ ವರದಿಯಾಗಿದೆ.

Edited By : Vijay Kumar
PublicNext

PublicNext

17/02/2021 12:24 pm

Cinque Terre

93.51 K

Cinque Terre

8

ಸಂಬಂಧಿತ ಸುದ್ದಿ