ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಡ್ನಿ ಮಾರಾಟಕ್ಕಿಟ್ಟ ಸಾರಿಗೆ ನೌಕರ: ಸಂಬಳದ ಸಂಕಟ ಯಾರಿಗೆ ಹೇಳೋಣ?

ಕೊಪ್ಪಳ: ಲಾಕ್ ಡೌನ್ ಅವಧಿಯಿಂದ ಇಲ್ಲಿಯವರೆಗೂ ನಿಯಮಿತವಾಗಿ ಸಂಬಳ ಬರುತ್ತಿಲ್ಲ. ಹೀಗಾಗಿ ಆರ್ಥಿಕ ಸಂಧಿಗ್ಧತೆಗೆ ತುತ್ತಾದ ಹಿನ್ನಲೆಯಲ್ಲಿ ಕೊಪ್ಪಳದ ಸಾರಿಗೆ ನೌಕರರೊಬ್ಬರು ತಮ್ಮ ಕಿಡ್ನಿ ಮಾರಾಟಕ್ಕಿಟ್ಟಿದ್ದಾರೆ.

ಕುಷ್ಟಗಿಯ ನಿವಾಸಿ ಹನುಮಂತ ಕಳಗೇರ್ ತನ್ನ ಕಿಡ್ನಿಯನ್ನು ಮಾರಾಟಕ್ಕಿಟ್ಟವರಾಗಿದ್ದಾರೆ. ಕಳೆದ 20 ವರ್ಷಗಳಿಂದ ಸಾರಿಗೆ ಇಲಾಖೆಯ ಗಂಗಾವತಿ ಡಿಪೋದಲ್ಲಿ ನಿರ್ವಾಹಕರಾಗಿ ಇವರು ಕರ್ತವ್ಯದಲ್ಲಿದ್ದಾರೆ. ಲಾಕ್ ಡೌನ್ ಆದಾಗಿನಿಂದ ಸರಿಯಾಗಿ ಸಂಬಳ ಆಗಿಲ್ಲ. ಜೊತೆಗೆ ಕಳೆದ ಎರಡು ತಿಂಗಳಿಂದ ಅರ್ಧ ಸಂಬಳ ಆಗುತ್ತಿದ್ದು, ಇದರಿಂದಾಗಿ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಮನೆ ಬಾಡಿಗೆ ಕಟ್ಟಲಾಗುತ್ತಿಲ್ಲ. ರೇಷನ್ ತರಲು ಆಗುತ್ತಿಲ್ಲ ಕಾರಣ ನನ್ನ ಕಿಡ್ನಿಯನ್ನು ಮಾರಾಟಕ್ಕಿಟ್ಟಿದ್ದೇನೆ ಎಂದು ಹನುಮಂತ ಕಳಗೇರ್ ಅವರು ತಮ್ಮ ಫೇಸಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಹನುಮಂತ ಅವರಿಗೆ ಪ್ರತಿ ತಿಂಗಳು 16 ಸಾವಿರ ಸಂಬಳ ಬರುತ್ತಿತ್ತು, ಆದರೆ ಕಳೆದ ಎರಡು ತಿಂಗಳಿನಿಂದ 3 ಸಾವಿರ ಸಂಬಳ ಬರುತ್ತಿದ್ದು, ಆದರೆ ತಿಂಗಳಿಗೆ 3500 ಸಾವಿರ ಮನೆ ಬಾಡಿಗೆ ನೀಡಬೇಕಿದೆ. ಮೂರು ಮಕ್ಕಳು, ತಾಯಿ, ಪತ್ನಿಯನ್ನು ಸಾಕಬೇಕಾಗಿದೆ. ಜೊತೆಗೆ ಅವರಿವರಿಂದ ಕೈಗಡ ಸಾಲ ಪಡೆದಿದ್ದಾರೆ. ಈ ಎಲ್ಲ ಸಮಸ್ಯೆಗಳಿಂದ ಕಂಗೆಟ್ಟು ಹನುಮಂತ ಅವರು ಅಂತಿಮವಾಗಿ ಕಿಡ್ನಿ ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

Edited By : Nagaraj Tulugeri
PublicNext

PublicNext

10/02/2021 01:46 pm

Cinque Terre

75.41 K

Cinque Terre

19

ಸಂಬಂಧಿತ ಸುದ್ದಿ