ಕೋಲ್ಕತಾ: ಮದುವೆವೊಂದರಲ್ಲಿ ದಂಪತಿ ಥೇಟ್ ಆಧಾರ ಕಾರ್ಡ್ ಮಾದರಿಯಲ್ಲಿಯೇ ಮದುವೆಯ ಊಟದ ಮೆನು ತಯಾರಿಸಿರುವ ಫೋಟೋ ವೈರಲ್ ಆಗಿದೆ.
ಕೋಲ್ಕತಾದಲ್ಲಿಯ ಆಧಾರ್ ಕಾರ್ಡ್ ಇದೀಗ ಭಾರಿ ವೈರಲ್ ಆಗಿದೆ. ಆಧಾರ್ ಕಾರ್ಡ್ ನಲ್ಲಿ ಇರುವ ವ್ಯಕ್ತಿಯ ಮಾಹಿತಿಯ ಬದಲು ಫಿಷ್ ಫ್ರೈ, ಮಟನ್ ಕಾಷಾ, ಪಾಪಡ್, ಐಸ್ಕ್ರೀಂ… ಹೀಗೆ ಮೆನು ಕಾಣಿಸಿಕೊಂಡಿದೆ.
ಅಷ್ಟಕ್ಕೂ ಇದು ನಿಜವಾದ ಆಧಾರ್ ಕಾರ್ಡ್ ಅಲ್ಲ. ಬದಲಿಗೆ ಮದುವೆಗೆ ಬರುವ ಅತಿಥಿಗಳಿಗೆ ಮದುವೆ ಮಂಟಪದಲ್ಲಿ ನೀಡಿರುವ ಊಟದ ಮೆನುಕಾರ್ಡ್.
ಇಂಥದ್ದೊಂದು ವಿಶೇಷ ರೀತಿಯ ಕಾರ್ಡ್ ಮುದ್ರಿಸಿ ವೈರಲ್ ಆಗಿರುವ ಜೋಡಿಯ ಹೆಸರು ಗೊಗೋಲ್ ಸಹಾ ಮತ್ತು ಸುವರ್ಣ ದಾಸ್. ಈ ಕುರಿತು ಪ್ರತಿಕ್ರಿಯಿಸಿರುವ ಗೂಗೋಲ್, ಇದು ಸುವರ್ಣ ದಾಸ್ ಅವರ ಆಲೋಚನೆ. ನಾವಿಬ್ಬರೂ ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಮಾದರಿಯ ಮೆನುವನ್ನು ಹಂಚಿದ್ದೇವೆ ಎಂದಿದ್ದಾರೆ.
ಇನ್ನೊಂದು ತಮಾಷೆ ಎಂದರೆ ಮದುವೆ ಮನೆಯಲ್ಲಿ ರಾಶಿರಾಶಿಯಾಗಿ ಬಿದ್ದಿರುವ ಈ ಕಾರ್ಡ್ ನೋಡಿ, ಅಲ್ಲಿ ಬಂದವರೆಲ್ಲಾ ಅಯ್ಯೋ ಮದುವೆಗೆ ಬರುವಾಗ ಆಧಾರ್ ಕಾರ್ಡ್ ತರಬೇಕಿತ್ತೇನೋ ಎಂದು ಗೊಂದಲ ಆಗಿದ್ದೂ ಇದೆಯಂತೆ.
PublicNext
05/02/2021 02:32 pm