ಯಾದಗಿರಿ: ಉತ್ತರ ಕರ್ನಾಟಕದ ಕಡೆ ಮದುವೆಯ ಸಮಯದಲ್ಲಿ ಕರಡಿ ಮಜಲು, ಡೊಳ್ಳು ಕುಣಿತ ಕಾಮನ್. ಆ ಗ್ರಾಮದಲ್ಲಿ ಮಾತ್ರ ಯಾವ ಮದುವೆಯಂತು ಇರಲಿಲ್ಲ, ಆದರೆ ಬಾಜಾ ಭಜಂತ್ರಿ ಜೋರಾಗಿಯೇ ಇತ್ತು. ಅಷ್ಟೇ ಅಲ್ಲದೇ ಇಡೀ ಗ್ರಾಮದಲ್ಲಿಯೇ ಹಬ್ಬದ ವಾತಾವರಣವಿತ್ತು. ಅಷ್ಟಕ್ಕೂ ಆ ಹಳ್ಳಿಯಲ್ಲಿ ನಡೆದ್ದಿದ್ದಾರೂ ಏನೂ ಗೊತ್ತಾ ಈ ಸ್ಟೋರಿ ನೋಡಿ...
ಐದು ವರ್ಷದ ಬಳಿಕ ವಿದೇಶದಿಂದ ಆಗಮಿಸಿದ ಯುವಕನಿಗೆ ಮನೆ ಮಗನಂತೆ ಈಡೀ ಗ್ರಾಮಸ್ಥರು ಭವ್ಯ ಸ್ವಾಗತ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಸ್ಪೇನ್ ದೇಶದಿಂದ ಆಗಮಿಸಿದ ಖಾಸಗಿ ಕಂಪನಿಯ ಇಂಜಿನಿಯರ್ ಬಸವರಾಜ ಸಂಕೀನ್ ಗೆ ಬಾಜಾ ಭಜಂತ್ರಿಯೊಂದಿಗೆ ಭವ್ಯ ಸ್ವಾಗತ ಕೊರಿದ್ದಾರೆ. ಗ್ರಾಮದ ಮಹಿಳೆಯರು ಆರತಿ ಬೆಳಗಿ ಗ್ರಾಮಕ್ಕೆ ಬರಮಾಡಿಕೊಂಡಿದ್ದಾರೆ. ತುಮಕೂರು ಗ್ರಾಮದ ಬಸವರಾಜ ಸಂಕೀನ್ ಕಳೆದ 5 ವರ್ಷದ ಹಿಂದೆ ಬಡತನದ ನಡುವೆ ಉನ್ನತ ವ್ಯಾಸಂಗ ಮಾಡಲು ಸ್ಪೇನ್ ದೇಶಕ್ಕೆ ತೆರಳಿದ್ದನು. ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ಅಭ್ಯಾಸ ಮುಗಿಸಿ ಎಎಸ್ ಟಿ ಕಂಪನಿಯಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ಪೇನ್ ದೇಶದಿಂದ ತಮ್ಮ ಊರಿಗೆ ಮರಳಿ ಬಂದಿದ್ದಾರೆ. ಐದು ವರ್ಷದ ಬಳಿಕ ತಮ್ಮ ಹುಟ್ಟುರಿಗೆ ಆಗಮಿಸಿದಕ್ಕೆ ಬಸವರಾಜ ಸಂಕೀನ್ ಖುಷಿಗೊಂಡಿದ್ದಾನೆ.
ಗ್ರಾಮಸ್ಥರೆಲ್ಲರೂ ಸೇರಿ ಪಟಾಕಿ ಸಿಡಿಸಿ, ಶ್ಯಾಲು ಹೊದಿಸಿ, ಹೂ ಮಾಲೆ ಹಾಕಿ ಸನ್ಮಾನ ಮಾಡಿದ್ದಾರೆ. ಹೊರದೇಶದಿಂದ ಬಂದ ಯುವಕನಿಗೆ ಸುಮಾರು ಎರಡು ಕಿಮೀ ವರೆಗೆ ಭವ್ಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ನೆರೆದಿದ್ದರು. ಮೆರವಣಿಗೆಯುದ್ದಕ್ಕೂ ಹಿರಿಯರು, ಕಿರಿಯರು, ಮಹಿಳೆಯರು ಹಾಗೂ ಮಕ್ಕಳು ಸಹ ಖುಷಿಯಿಂದಲೇ ಭಾಗವಹಿಸಿದ್ದರು. ತಮ್ಮೂರಿನ ಯುವಕ ವಿದೇಶದಿಂದ ಬಂದಿದ್ದಾನೆ ಎಂಬ ಪ್ರೀತಿ ಆತನ ಮೇಲಿತ್ತು. ಹಿಗಾಗಿ ಸ್ವಯಂ ಪ್ರೇರಿತರಾಗಿ ಗ್ರಾಮಸ್ಥರು ಸಹ ಖುಷಿ ವ್ಯಕ್ತಪಡಿಸಿದರು.
ಕಡು ಬಡತನದ ನಡುವೆ ಈ ಯುವಕ ಹೊರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ. ಈ ಯುವಕನ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸ್ವಗ್ರಾಮಕ್ಕೆ ತೆರಳಿದ ಯುವಕನಿಗೆ ಸನ್ಮಾನಿಸಿ, ಮೆರವಣಿಗೆ ಮಾಡಿದ್ದಾರೆ. ಇದು ಮತ್ತಷ್ಟು ಯುವಕರಿಗೆ ಸ್ಪೂರ್ತಿಯಾಗಿದೆ. ಇದೇ ರೀತಿ ಇನ್ನಷ್ಟು ಯುವಕರು ಒಳ್ಳೆಯ ವಿದ್ಯಾಭ್ಯಾಸ ಮಾಡಿ ಗ್ರಾಮಕ್ಕೆ ಕೀರ್ತಿ ತರಲಿ..
PublicNext
04/02/2021 07:02 pm